ಯಾವುದಾದರೂ ಕಾರ್ಯಕ್ರಮದಲ್ಲಿ ಜತೆಯಾಗಿ ಕಿಲ ಕಿಲ ಎಂದಿದ್ದ ಸೆಲೆಬ್ರೆಟಿಗಳು ಮತ್ತೊಂದು ಕಾರ್ಯಕ್ರಮದಲ್ಲಿ ಬೇರೆ ಬೇರೆ ಕೂತಿದ್ದರೆ ಸಾಕು ಅಭಿಮಾನಿಗಳು ಹೊಸ ಹೊಸ ಕಥೆಗಳನ್ನು ಕಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಮಾನ ಹರಾಜಾಕಿರುತ್ತಾರೆ. ಅದು ಸತ್ಯವಾಗಿದ್ದರೂ, ಸುಳ್ಳಾಗಿದ್ದರೂ ಸಹ ಟಿವಿ ಚಾನೆಲ್ ಗಳು ದೊಡ್ಡದೊಂದು ಸುದ್ದಿ ಎಂಬಂತೆ ಬಿಂಬಿಸಿ ಸಂಬಂಧಪಟ್ಟ ಸ್ಟಾರ್ ಗಳ ಚಾರಿತ್ರ್ಯವಧೆ ಮಾಡಲು ಶುರು ಮಾಡಿರುತ್ತಾರೆ. ಇಂತಹುದೇ ಪೀಕಲಾಟಕ್ಕೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಸಿಲುಕಿ ಸದ್ಯ ಸುದ್ದಿಯಲ್ಲಿದ್ದಾರೆ.
https://www.instagram.com/p/BzWJTx-BEMW/?utm_source=ig_web_copy_link
ಸುಶ್ಮಿತಾ ಸೇನ್ ಮತ್ತು ಗೆಳೆಯ ರೋಹ್ಮನ್ ಶಾಲ್ ನಡುವೆ ಬ್ರೇಕ್ ಅಪ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಫೇಕ್ ನ್ಯೂಸ್ ಹರಡಿಕೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸುಶ್ಮಿತಾ ಸೇನ್, ಅಭಿಮಾನಿಗಳನ್ನು ನಾನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಆದರೆ ಗಾಳಿ ಸುದ್ದಿ ಹಬ್ಬಿಸಬೇಡಿ. ಎಂದು ತಿಳಿಸಿದ್ದಾರೆ. ರೋಹ್ಮನ್ ಶಾಲ್ ಜೊತೆಗೆ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವಾಗ ತೆಗೆದ ಚಿತ್ರವೊಂದನ್ನು ಪೋಸ್ಟ್ ಮಾಡಿ, ‘ನೋಡಿ ರೋಹ್ಮನ್ ನನ್ನ ಜೊತೆ ಇದ್ದಾರೆ. ಐ ಲವ್ ಹಿಮ್, ಜಿಮ್‌ನಲ್ಲಿ ವರ್ಕ್‌ಔಟ್# ಹೋಮ್#ದುಬೈ, ನಾನು ನಿಮ್ಮನ್ನು ಪ್ರೀತಿಸುತ್ತೇನೆ. ಕೆಟ್ಟ ವಿಚಾರಗಳನ್ನು ಹಂಚಿಕೊಳ್ಳಬೇಡಿ’ ಎಂದು ಬರೆದಿದ್ದಾರೆ.











































