ಸದ್ಯದಲ್ಲೇ ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾ!

Picture of Cinibuzz

Cinibuzz

Bureau Report

ಬಾಲಿವುಡ್ ನಲ್ಲಿ ಈಗೀಗ ಬಯೋಪಿಕ್ ನದೇ ಹವಾ. ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಹಳಷ್ಟು ಸಾಧಕರ ಜೀವನವನ್ನು ತೆರೆಯ ಮೇಲೆ ತರುವ ರೇಸಿಗೆ ಬಿದ್ದಿರುವ ಬಿ ಟೌನ್ ಈಗಾಗಲೇ ಸಾಕಷ್ಟು ವ್ಯಕ್ತಿತ್ವಗಳ ಕುರಿತಾದ ಬಯೋಪಿಕ್ ಗಳನ್ನು ನಿರ್ಮಾಣ ಮಾಡಲು ಶುರುಮಾಡಿಕೊಂಡಿದೆ. ಸದ್ಯ ಭಾರತೀಯ ಮಹಿಳಾ ಕ್ರಿಕೆಟ್ ಸ್ಟಾರ್ ಆಟಗಾರ್ತಿ ಮಿಥಾಲಿ ರಾಜ್ ಜೀವನ ಕಥೆಯೂ ಸೇರ್ಪಡೆಯಾಗಲಿದೆ.

ಈಗಾಗಲೇ ಮಿಥಾಲಿ ರಾಜ್ ಗೆ ಚಿತ್ರಕ್ಕೆ ಸಂಬಂಧಿಸಿದಂತೆ ಪ್ರೀ ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆಯಂತೆ. ಅಂದಹಾಗೆ ಮಿಥಾಲಿ ರಾಜ್ ಪಾತ್ರದಲ್ಲಿ ಬಾಲಿವುಡ್ ನಟಿ ತಾಪ್ಸಿ ಕಾಣಿಸಿಕೊಳ್ಳಲಿದ್ದಾರೆಂಬ ಗುಸು ಗುಸು ಜೋರಾಗಿಯೇ ಇದೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತಾಪ್ಸಿಯೂ ಈ ಬಗ್ಗೆ ಕ್ಲೂ ಕೊಟ್ಟಿದ್ದಾರೆ. ಸದ್ಯ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾ ತಯಾರಾಗುತ್ತಿದೆ. ಅಲ್ಲದೇ ಭಾರತದ ಮೊದಲ ವಿಶ್ವಕಪ್ ಸಿಹಿ ಕ್ಷಣವನ್ನು ಸಿನಿಮಾವಾಗಿ ತೆರೆಗೆ ಬರಲಿದೆ. ಇದರ ಜೊತೆಗೀಗ ಸ್ಟಾರ್ ಕ್ರಿಕೆಟರ್ ಮಿಥಾಲಿ ರಾಜ್ ಸಿನಿಮಾ ರೆಡಿಯಾಗುತ್ತಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಸಂತಸ ತಂದಿದೆ. ಎಲ್ಲವೂ ಅಂದುಕೊಂಡಂತಾದರೆ ಮುಂದಿನ ವರ್ಷ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top