‘ಮೈನೇ ಪ್ಯಾರ್ ಕಿಯಾ’ ಭಾಗ್ಯಶ್ರೀ ಪತಿ ಅರೆಸ್ಟ್!

Picture of Cinibuzz

Cinibuzz

Bureau Report

ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಬಿ ಟೌನ್ ನಲ್ಲಿ ಗುರುತಿಸಿಕೊಳ್ಳಲು ಸಾಥ್ ಕೊಟ್ಟ ಸಿನಿಮಾ ಮೈನೇ ಪ್ಯಾರ್ ಕಿಯಾ. ಇದೇ ಚಿತ್ರದ ಮೂಲಕ ಬಿ ಟೌನ್ ಗೆ ಇಂಟ್ರಡ್ಯೂಸ್ ಆಗಿದ್ದ ಭಾಗ್ಯಶ್ರೀ ಕೂಡಾ ರಾತ್ರೋ ರಾತ್ರಿ ಫೇಮಸ್ ಆಗಿದ್ದರು. ಮೈನೇ ಪ್ಯಾರ್ ಕಿಯಾ ನಂತರ ಸಲ್ಮಾನ್ ಖಾನ್ ಬಾಲಿವುಡ್ ರಂಗದಲ್ಲಿ ಸ್ಟ್ರಾಂಗ್ ಆಗಿ ನೆಲೆಯೂರಿದ್ದರೆ, ಯಶಸ್ಸಿನ ತುದಿಯಲ್ಲಿರುವಾಗಲೇ ಭಾಗ್ಯಶ್ರೀ ಹಿಮಾಲಯ ದಾಸನಿ ಜೊತೆ ಸಪ್ತಪದಿ ತುಳಿದಿದ್ದರು.

ಸದ್ಯ ಸುದ್ದಿ ಏನಂದ್ರೆ ಭಾಗ್ಯಶ್ರೀ ಅವರ ಪತಿ ಹಿಮಾಲಯ ದಾಸನಿ ಇತ್ತೀಚಿಗೆ ಜೂಜು ಅಡ್ಡೆಯೊಂದರಲ್ಲಿ 15 ಮಂದಿಯೊಂದಿಗೆ ಬಂಧಿತರಾಗಿದ್ದಾರೆ. ಹಿಮಾಲಯ ದಾಸನಿ ಅವರನ್ನು ಬಂಧಿಸಿರುವ ಅಂಬೋಲಿ ಠಾಣೆ ಪೊಲೀಸರು ನಂತರ ಜಾಮೀನಿನ ಮೇಲೆ ರಿಲೀಸ್ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನಷ್ಟು ಓದಿರಿ

Scroll to Top