ಅತ್ಯಾಚಾರ ಪ್ರಕರಣದ ಅಡಿಯಲ್ಲಿ ನಟ ಆದಿತ್ಯ ಪಂಚೋಲಿ ಬಂಧನಕ್ಕೆ ಮುಂಬೈ ಡಿಂಡೋಶಿ ಸೆಷನ್ ಕೋರ್ಟ್ ಮಧ್ಯಂತರ ತಡೆ ನೀಡಿದೆ. 54ರ ಹರೆಯದ ಪಂಚೋಲಿ ಅವರ ವಿರುದ್ಧ ಮುಂಬೈ ಪೊಲೀಸರು ಕಳೆದ ತಿಂಗಳು ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ತನ್ನನ್ನು ಬಂಧಿಸದಂತೆ ಪಂಚೋಲಿ ಕೋರ್ಟ್ ಮೆಟ್ಟಿಲ್ಲನ್ನೇರಿದ್ದರು.

ಇದರನ್ವಯ ಜುಲೈ 19ರ ತನಕ ಪಂಚೋಲಿಯನ್ನು ಬಂಧಿಸಬಾರದು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಬಾಲಿವುಡ್ ನಟಿಯೊಬ್ಬರು ನೀಡಿರುವ ದೂರಿನನ್ವಯ ಪಂಚೋಲಿ ವಿರುದ್ಧ ಅತ್ಯಾಚರ ಮತ್ತು ಹಲ್ಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.











































