ಹುಲಿಬೇಟೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಣಧೀರ್ ನಾಯಕ್ ಎಂಬುವವರ ಮೇಲೆ ಸಹನಟಿ ಅಂಜಲಿ ಲೈಂಗಿಕ ಆರೋಪವನ್ನು ಮಾಡಿದ್ದಾರೆ. ಹೌದು ಅಂಜಲಿಯ ಜೊತೆ ಮಾತನಾಡಿರುವ ತುಣುಕನ್ನು ಆಧಾರವಾಗಿಟ್ಟುಕೊಂಡು ನಿರ್ಮಾಪಕ ರಣಧೀರ್ ನಾಯಕ್ ಅಂಜಲಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅಲ್ಲದೇ ದೈಹಿಕ ಸಂಪರ್ಕಕ್ಕೂ ಕರೆದಿದ್ದಾರೆ ಎನ್ನಲಾಗಿದೆ.

ಅಂಜಲಿಯ ಬಳಿ ದುಡ್ಡಿಗೆ ಬೇಡಿಕೆ ಇಟ್ಟಿರುವ ರಣಧೀರ್ ನಾಯಕ್ ಹಣ ಕೊಡದಿದ್ದರೆ ತನ್ನ ಬಳಿ ಇರುವ ವಿಡಿಯೋವೊಂದನ್ನು ವೈರಲ್ ಮಾಡುವುದಾಗಿಯೇ ಬೆದರಿಕೆ ಒಡ್ಡಿದ್ದಾರೆ. ಈ ವಿಚಾರವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಅಂಜಲಿ ರಣಧೀರ್ ನಾಯಕ್ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ರಣಧೀರ್ ನಾಯಕ್ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿದೆ. ಇನ್ನು ಈ ಪ್ರಕರಣದ ಕುರಿತು ಹುಲಿಬೇಟೆ ಸಿನಿಮಾ ನಿರ್ದೆಶಕ ರಾಜ್ ಬಹದ್ದೂರ್ ಪ್ರತಿಕ್ರಿಯಿಸಿದ್ದು, ಘಟನೆಗೂ ಹುಲಿಬೇಟೆ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅಸಲಿಗೆ ರಣಧೀರ ನಾಯಕ್ ನಿರ್ಮಾಪಕನೇ ಅಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.











































