ಅಭಿಮಾನಿ ಅನುಚಿತ ವರ್ತನೆಗೂ ಸಿಟ್ಟಾಗದ ಕತ್ರಿನಾ ಕೈಫ್!

Picture of Cinibuzz

Cinibuzz

Bureau Report

ಸೆಲೆಬ್ರೆಟಿಗಳೂ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯಹರಣವನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಸೆಲೆಬ್ರೆಟಿಗಳು ಇದರ ಸಲುವಾಗಿ ಪಬ್ಲಿಕ್ಕಿಗೆ ತಲೆ ಹಾಕುವುದೂ ಕಡಿಮೆ. ಇನ್ನೂ ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ.

ಇತ್ತೀಚಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಕತ್ರಿನಾ ಕೈಫ್ ತಮ್ಮ ಬಾಡಿಗಾರ್ಡ್ ಜೊತೆ ಬರುತ್ತಿದ್ದರು. ಇದೇ ವೇಳೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅಗ ಅಭಿಮಾನಿಯೊಬ್ಬ ಕತ್ರಿನಾ ಮೇಲೆ ಬೀಳಲು ಪ್ರಯತ್ನಿಸಿದ್ದಾನೆ. ಅಭಿಮಾನಿ ಹತ್ತಿರ ಬರುತ್ತಿದ್ದಂತೆ ಕತ್ರಿನಾ ಬಾಡಿಗಾರ್ಡ್ ಆತನನ್ನು ದೂರ ಹೋಗಲು ತಿಳಿಸಿದ್ದಾರೆ. ಆದರೆ ಅಭಿಮಾನಿ ಬಾಡಿಗಾರ್ಡ್ ಮಾತು ಕೇಳದೇ ಸೆಲ್ಫಿ ತೆಗೆದುಕೊಳ್ಳಲು ಕತ್ರಿನಾ ಬಳಿ ಬಂದಿದ್ದಾನೆ. ಅಭಿಮಾನಿಯ ಅನುಚಿತ ವರ್ತನೆಗೂ ಸಂಯಮ ಕಳೆದುಕೊಳ್ಳದ ಕತ್ರಿನಾ ‘ಆರಾಮಾಗಿ ಅಲ್ಲಿಂದಲೇ ಸೆಲ್ಫಿ ತೆಗೆದುಕೊಳ್ಳಿ’ ಎಂದು ಹೇಳಿದ್ದಾರೆ. ಕತ್ರಿನಾ ಅಭಿಮಾನಿ ಜತೆ ನಡೆದುಕೊಂಡು ರೀತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕತ್ರಿನಾರನ್ನು ಕೊಂಡಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top