ಮದುವೆಯಾಗದೇ ಮಕ್ಕಳನ್ನು ಹೊಂದಬಹುದು: ಮಾಹಿ ಗಿಲ್

Picture of Cinibuzz

Cinibuzz

Bureau Report

ಬಿ ಟೌನಿನ ಹಿಟ್ ಸಿನಿಮಾ ದೇವ್ ಡಿ ಯಲ್ಲಿ ನಟಿಸಿದ್ದ ಮಾಹಿ ಗಿಲ್ ತದನಂತರ ಎಣಿಕೆಯ ಚಿತ್ರಗಳಲ್ಲಿ ನಟಿಸಿ ಬಣ್ಣದ ಲೋಕಕ್ಕೆ ವಿದಾಯವನ್ನೇ ಹೇಳಿಬಿಟ್ಟಿದ್ದರು. ಇದೀಗ ಮತ್ತೆ ಮಾಧ್ಯಮದ ಮುಂದೆ ಪ್ರತ್ಯಕ್ಷವಾಗಿರುವ ಅವರು ತಮ್ಮ ಪರ್ಸನಲ್ ಲೈಫಿನ ಕುರಿತಾಗಿಯೂ ಮುಕ್ತವಾಗಿ ಟಾಕ್ ಮಾಡಿದ್ದಾರೆ.

ಯೆಸ್.. ನಾನು ಲೀವಿಂಗ್ ರಿಲೇಷನ್ ಶಿಪ್ ನಲ್ಲಿದ್ದು, ಈಗಾಗಲೇ ಮೂರು ವರ್ಷದ ಮಗಳನ್ನು ಹೊಂದಿದ್ದೇನೆ ಎಂದಿದ್ದು,ಮದುವೆಯಾಗದಿದ್ದರೂ ಮಕ್ಕಳು, ಕುಟುಂಬವನ್ನು ಹೊಂದಬಹುದು ಎಂದು ಅಭಿಪ್ರಾಯಪಟ್ಟು ನೆರೆದಿದ್ದವರಿಗೆ ಶಾಕ್ ಕೊಟ್ಟಿದ್ದಾರೆ. ಮಗಳಿರುವ ವಿಚಾರವನ್ನು ಇದುವರೆಗೂ ಹೈಡ್ ಮಾಡಿದ್ದೇಕೆ ಎನ್ನುವ ಪ್ರಶ್ನೆಗೂ ಉತ್ತರಿಸಿರುವ ಮಾಹಿ ಯಾರೂ ನನ್ನನ್ನು ಕೇಳಲಿಲ್ಲ ನಾನು ಹೇಳಲಿಲ್ಲ ಎಂದು ಜಾಣತನದ ಉತ್ತರವನ್ನು ನೀಡಿದ್ದಾರೆ. ಅಲ್ಲದೇ ಮುಂದೆ ಮದುವೆಯಾಗುತ್ತೀರಾ ಎನ್ನುವ ಪ್ರಶ್ನೆಗೆ ಮದುವೆಯಾಗುವ ಅಗತ್ಯವೇನಿದೆ ಎಂದು ಮರು ಪ್ರಶ್ನೆಯನ್ನು ಕೇಳಿ ಎಲ್ಲರನ್ನೂ ಗಪ್ ಚಿಪ್ ಆಗುವಂತೆಯೂ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top