ತಮಿಳಿನ ಬಿಗಿಲ್ ಚಿತ್ರನಲ್ಲಿ ಕಿಂಗ್ ಖಾನ್!

Picture of Cinibuzz

Cinibuzz

Bureau Report

ತಮಿಳು ಸೂಪರ್ ಸ್ಟಾರ್ ವಿಜಯ್ ಹಾಗೂ ಲೇಡಿ ಸೂಪರ್ ಸ್ಟಾರ್ ನಯನ ತಾರಾ ಜೋಡಿಯಾಗಿ ನಟಿಸಿರುವ ಸಿನಿಮಾ ಬಿಗಿಲ್. ವರ್ಷದ ಆರಂಭದಿಂದಲೂ ಪದೇ ಪದೇ ಸುದ್ದಿಯಲ್ಲಿದ್ದ ಬಿಗಿಲ್ ಕಳೆದ ತಿಂಗಳು ಟೈಟಲ್ ವಿಚಾರವಾಗಿಯೂ ನ್ಯೂಸಾಗಿತ್ತು. ಈಗ  ಚಿತ್ರದ ಕುರಿತು ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಶಾಕಿಂಗ್ ನ್ಯೂಸ್ ಏನಂದ್ರೆ ತಮಿಳಿನ ಬಿಗಿಲ್ ಚಿತ್ರಕ್ಕೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರನ್ನು ಕರೆತರುವ ಪ್ಲ್ಯಾನ್ ನಲ್ಲಿ ಚಿತ್ರತಂಡವಿದೆಯಂತೆ. ಯೆಸ್.. ಶಾರುಖ್ ಖಾನ್ ಬಿಗಿಲ್ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸಲಿದ್ದು, ನಾಯಕ ನಟ ವಿಜಯ್ ಜತೆ ಹೆಜ್ಜೆ ಹಾಕಲಿದ್ದಾರಂತೆ.

ಈ ಕುರಿತು ಶಾರುಖ್ ಆಪ್ತ ಮೂಲಗಳೇ ಖಚಿತಪಡಿಸಿದ್ದು, ಶಾರುಖ್ ಖಾನ್ ಕಡೆಯಿಂದಲೂ ಗ್ರೀನ್ ಸಿಗ್ನಲ್ ದೊರೆತಿದೆಯಂತೆ. ಜೀರೋ ಸಿನಿಮಾ ಸೋಲಿನ ನಂತರ ಶಾರುಖ್ ಖಾನ್ ಯಾವುದೇ ಸಿನಿಮಾಗಳಲ್ಲಿ ನಟಿಸದಿರುವುದು ಅಭಿಮಾನಿಗಳಲ್ಲಿ ಬೇಸರವನ್ನು ತರಿಸಿದ್ದು, ಬಿಗಿಲ್ ಮೂಲಕವಾದರೂ ಅಭಿಮಾನಿಗಳ ದಿಲ್ ಖುಷ್ ಆಗುತ್ತಾರೋ ನೋಡಬೇಕು. ‘ಬಿಗಿಲ್‌’ ಸಿನಿಮಾವನ್ನು ಅತ್ಲೀ ಕುಮಾರ್ ನಿರ್ದೇಶಿಸುತ್ತಿದ್ದು, ಎ.ಆರ್. ರೆಹಮಾನ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ವಿಶೇಷವೆಂದರೆ ಬಿಗಿಲ್ ನಲ್ಲಿ ಜಾಕಿ ಶ್ರಾಫ್‌ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಸ್ಪೋರ್ಟ್ಸ್‌ ಆ್ಯಕ್ಷನ್‌ ಸಿನಿಮಾಗಿದ್ದು ಅಕ್ಟೋಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top