ಹಾಲಿವುಡ್ ಗೆ ಹಾರಲಿದ್ದಾರೆ ಕಾಜಲ್!

Picture of Cinibuzz

Cinibuzz

Bureau Report

ಕ್ಯೂ ಹೋ ಗಯಾ ನಾ ಹಿಂದಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಪಡೆದ ನಟಿ ಕಾಜಲ್ ಅಗರ್ ವಾಲ್. ಬಳಿಕ ತೆಲುಗು ಚಿತ್ರ ಲಕ್ಷ್ಮೀ ಕಲ್ಯಾಣಂ ಮೂಲಕ ಟಾಲಿವುಡ್ ಗೂ ಎಂಟ್ರಿ ಪಡೆದರು. ಆನಂತರ ತಿರುಗಿಯೂ ನೋಡದ ಸಕ್ಸಸ್ ಪಡೆದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಚಾರ್ಮ್ ಉಳಿಸಿಕೊಂಡರು. ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಳ್ಳಲು ರೆಡಿಯಾಗಿರುವ ಕಾಜಲ್ ಇಂಗ್ಲೀಷ್ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಳ್ಲಲಿರುವ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ವಿಷ್ಣು ಮಂಚು ನಟಿಸಿ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರಕ್ಕಾಗಿ ನಾಯಕಿಯರ ಹುಡುಕಾಟದಲ್ಲಿದ್ದಾಗ ಸ್ವತಃ ವಿಷ್ಣು ಮಂಚು ಅವರೇ ಕಾಜಲ್ ಅಗರ್ ವಾಲ್ ಹೆಸರನ್ನು ಸೂಚಿಸಿದ್ದಾರಂತೆ. ಸಿನಿಮಾದ ಕುರಿತು ಕಾಜಲ್ ಅವರೊಂದಿಗೆ ಮಾತುಕತೆ ಇನ್ನೂ ಮೊದಲ ಲೆವೆಲ್ ನಲ್ಲಿದ್ದು, ಕಥೆ ಕಾಜಲ್ ಅವರಿಗೆ ತುಂಬಾ ಇಷ್ಟವಾಗಿದೆಯಂತೆ. ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆಯೂ ಇದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಈಗಾಗಲೇ ಬಿಗ್ ಬಜೆಟ್ ಚಿತ್ರಗಳಾದ ಪ್ಯಾರಿಸ್ ಪ್ಯಾರಿಸ್, ಕೋಮಲಿ, ರಣರಂಗಂನಲ್ಲಿ ನಟಿಸುತ್ತಿದ್ದಾರೆ. ಜತೆಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ಕಾಜಲ್ ನಟಿಸುತ್ತಿದ್ದು, ಈ ಚಿತ್ರವನ್ನು ಪ್ರಶಾಂತ್‌ ವರ್ಮಾ ನಿರ್ದೇಶನ ಮಾಡುತ್ತಿದ್ದು, ಕಲ್ಕು ಖ್ಯಾತಿಯ ಸಿ ಕಲ್ಯಾಣ್‌ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top