ಸಾಹೋ ಚಿತ್ರದ `ಸೈಕೋ ಸೈಯಾನ್ ಸಾಂಗ್’ ಫಸ್ಟ್ ಲುಕ್ ರಿಲೀಸ್!

Picture of Cinibuzz

Cinibuzz

Bureau Report

ಬಾಹುಬಲಿ ಯಶಸ್ಸಿನ ನಂತರ ಪ್ರಭಾಸ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಸಾಹೋ. ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಗೂ ಮೊದಲೇ ಸದ್ದು ಮಾಡುತ್ತಿರುವ ಸಾಹೋ ಚಿತ್ರದ ಮೊದಲ ಹಾಡು ಸೈಕೋ ಸೈಯಾನ್ ಫಸ್ಟ್ ಲುಕ್ ರಿಲೀಸ್ ಆಗಿದೆ. ಸೂಪರ್ ಸ್ಟಾರ್ ಪ್ರಭಾಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟರ್ ರಿಲೀಸ್ ಮಾಡಿದ್ದು ‘ಹೇ ಡಾರ್ಲಿಂಗ್ಸ್ … ಇದು ಸಾಹೋ ಚಿತ್ರದ ಮೊದಲ ಗೀತೆಯ ಸಮಯ …’ ದಿ ಸೈಕೋ ಸೈಯಾನ್ ‘ ಶೀಘ್ರದಲ್ಲೇ ಹೊರಬರಲಿದೆ ..

ಹಾಡಿನ ಟೀಸರ್ ಸದ್ಯದಲ್ಲೇ ರಿಲೀಸ್ ಆಗಲಿದೆ’ ಎಂದು ಬರೆದುಕೊಂಡಿದ್ದಾರೆ. ಸಾಹೋ’ ಚಿತ್ರವನ್ನು ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಚಿತ್ರೀಕರಿಸಲಾಗಿದ್ದು, ಇದು ಸ್ವಾತಂತ್ರ್ಯ ದಿನಾಚರಣೆಯಂದು 2019 ರ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಾಹೋ ತಾರಾಂಗಣದಲ್ಲಿ ಪ್ರಭಾಸ್, ಶ‍್ರದ್ಧಾ ಕಪೂರ್, ನೀಲ್ ನಿತಿನ್ ಮುಖೇಶ್, ಚಂಕಿ ಪಾಂಡೆ, ಎವೆಲಿನ್ ಶರ್ಮಾ, ಮಂದಿರಾ ಬೇಡಿ ಮತ್ತು ಜಾಕಿ ಶ್ರಾಫ್ ನಟಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top