ಇಸ್ಮಾರ್ಟ್ ಶಂಕರ್ ಟ್ರೇಲರ್ ರಿಲೀಸ್!

Picture of Cinibuzz

Cinibuzz

Bureau Report

ಪುರಿ ಜಗನ್ನಾಥ್ ನಿರ್ದೇಶನದ ಇಸ್ಮಾರ್ಟ್ ಶಂಕರ್ ಟ್ರೇಲರ್ ಹೊರಬಿದ್ದಿದೆ. ಚಿತ್ರದಲ್ಲಿ ಟಾಲಿವುಡ್ ಹೀರೋ ರಾಮ್ ನನ್ನು ಹಿಂದೆಂದಿಗಿಂತಲೂ ಕಾಣದ ಶೇಡ್ ನಲ್ಲಿ ಪುರಿ ಜಗನ್ನಾಥ್ ತೋರಿಸುವ ಪ್ರಯತ್ನವನ್ನು ಮಾಡಿದ್ದು, ರಾಮ್ ಡಬಲ್ ಡೋಸ್ ಎನರ್ಜಿಯೊಂದಿಗೆ ಟ್ರೇಲರ್ ನಲ್ಲಿ ಮಿಂಚಿದ್ದಾರೆ.

ಮತ್ತೊಮ್ಮೆ ಪ್ರೇಕ್ಷಕರನ್ನು ಆಕರ್ಷಿಸುವ ಡೈಲಾಗುಗಳನ್ನು ಪುರಿ ಜಗನ್ನಾಥ್ ಬರೆದಿದ್ದಾರೆ. ಗ್ಲಾಮರ್ ಲುಕ್ ನಲ್ಲಿ ನಿಧಿ ಅಗರ್ವಾಲ್ ಮತ್ತು ನಭಾ ನಟೇಶ್ ಕಾಣಿಸಿಕೊಂಡಿದ್ದು, ಸತ್ಯದೇವ್ ಪ್ರಮುಖ ಪಾತ್ರದಲ್ಲಿದ್ದಾರೆ. ಇಸ್ಮಾರ್ಟ್ ಶಂಕರ್ ಜುಲೈ 18ರಂದು ಬಿಡುಗಡೆಯಾಗಲಿದೆ.

ಇನ್ನಷ್ಟು ಓದಿರಿ

Scroll to Top