ಸಿದ್ಧಾರ್ಥ್ ಮಲ್ಹೋತ್ರ ಮತ್ತು ಪರಿಣಿತಿ ಚೋಪ್ರಾ ನಟನೆಯ ಜಬರಿಯಾ ಜೋಡಿ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡಿದೆ. ಅಭಯ್ ಹಾಗೂ ಬಬ್ಲಿಯ ಪ್ರೇಮಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಬಿಹಾರದ ಹಳ್ಳಿಯೊಂದರಲ್ಲಿ ನಡೆಯುವ ಕತೆಯನ್ನು ಚಿತ್ರಿಸಲಾಗಿದೆ. ವರದಕ್ಷಿಣೆ ವಿರುದ್ಧವಾಗಿ ಹೋರಾಡುವ ಕಥೆಯನ್ನು ಜಬರಿಯಾ ಜೋಡಿ ಹೊಂದಿದೆ. ತಾರಾಂಗಣದಲ್ಲಿ ಅಪರ ಶಕ್ತಿ ಖುರಾನಾ, ಸಂಜಯ್ ಮಿಶ್ರಾ, ನೀರಜ್ ಸೂದ್, ಗೋಪಾಲ್ ದತ್, ಜಾವೇದ್ ಜಾಫ್ರೆ, ಚಂದನ್ ರಾಯ್ ಸನ್ವಾಲ್ ನಟಿಸಿದ್ದಾರೆ.
ತಾರಾಂಗಣದಲ್ಲಿ ಅಪರ ಶಕ್ತಿ ಖುರಾನಾ, ಸಂಜಯ್ ಮಿಶ್ರಾ, ನೀರಜ್ ಸೂದ್, ಗೋಪಾಲ್ ದತ್, ಜಾವೇದ್ ಜಾಫ್ರೆ, ಚಂದನ್ ರಾಯ್ ಸನ್ವಾಲ್ ನಟಿಸಿದ್ದಾರೆ.ಈ ಕಾಮಿಡಿ ಡ್ರಾಮವನ್ನು ಶೋಭಾ ಕಪೂರ್ ಮತ್ತು ಏಕ್ತಾ ಕಪೂರ್ ನಿರ್ಮಿಸಿದ್ದಾರೆ. ಪ್ರಶಾಂತ್ ಸಿಂಗ್ ನಿರ್ದೇಶಿಸಿದ್ದಾರೆ. ಆಗಸ್ಟ್ 2ರಂದು ಸಿನಿಮಾ ಬಿಡುಗಡೆಯಾಗಲಿದೆ.











































