ಅಲಿ ಅಬ್ಬಾಸ್ ಜಾಫರ್ ಹೊಸ ಸಿನಿಮಾ!

Picture of Cinibuzz

Cinibuzz

Bureau Report

ದಡಕ್ ಸಿನಿಮಾ ಮೂಲಕ ಬಿ ಟೌನಿನಲ್ಲಿ ಗುರುತಿಸಿಕೊಂಡಿರುವ ಇಶಾನ್ ಖಡ್ಡರ್ ಸದ್ಯ ಭಾರತ್ ಖ್ಯಾತಿಯ ಅಲಿ ಅಬ್ಬಾಸ್ ಜಾಫರ್ ಅವರ ಅಪ್ ಕಮಿಂಗ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟನೆಯ ಭಾರತ್ ಸಿನಿಮಾವನ್ನು ನಿರ್ಮಿಸಿದ್ದ ಅಲಿ ಅಬ್ಬಾಸ್ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು, ನಿರ್ದೇಶನದ ಜವಾಬ್ದಾರಿಯನ್ನು ಅವರೇ ವಹಿಸಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ಪ್ರೇಮ ಕಥಾ ಆಧಾರಿತ ಸಿನಿಮಾವಾಗಿದ್ದು, ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿದ್ದು, ಸದ್ಯದಲ್ಲಿಯೇ ಅಧಿಕೃತ ಮಾಹಿತಿ ಹೊರಬೀಳಲಿದೆ.

ಇನ್ನಷ್ಟು ಓದಿರಿ

Scroll to Top