ಮುಂದಿನ ತಿಂಗಳು ಜನ್ ಧನ್ ಬಿಡುಗಡೆ!

Picture of Cinibuzz

Cinibuzz

Bureau Report

ಶ್ರೀ ಸಿದ್ದವಿನಾಯಕ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಜನ್ ಧನ್ ಚಿತ್ರದ ಪ್ರಥಮ ಪ್ರತಿ ರೆಡಿಯಾಗಿದ್ದು, ಮುಂದಿನ ತಿಂಗಳು ರಿಲೀಸ್ ಆಗಲಿದೆ. ಈ ಚಿತ್ರವು ಬೆಂಗಳೂರಿನಿಂದ ಶಿರಾವರೆಗೂ ನಡೆಯುವ ಒಂದು ದಿನದ ಕಥೆಯನ್ನು ಒಳಗೊಂಡಿದ್ದು, ಎನ್ ಎಚ್ 4 ನಲ್ಲಿ ಬೆಳಿಗ್ಗೆ 4 ಗಂಟೆಗೆ ಪ್ರಾರಂಭವಾದರೆ ಸಂಜೆಗೆ ಕೊನೆಗೊಳ್ಳುತ್ತದೆ. ಜೊತೆಗೆ ಕಾಮನ್ ಮತ್ತು ರಾಯಲ್ ಮ್ಯಾನ್ ನಡುವಿನ ಸಂಘರ್ಷವನ್ನು ಜನ್ ಧನ್ ನಲ್ಲಿ ತೋರಿಸಲಾಗಿದೆ.

ಈ ಚಿತ್ರವನ್ನು ಟಿ. ನಾಗಚಂದ್ರ ನಿರ್ದೇಶನ ಮಾಡಿದ್ದಾರೆ. ಜನ್ ಧನ್ ತಾರಾಂಗಣದಲ್ಲಿ ಸುನೀಲ್ ಶಶಿ, ರಚನಾ ದಶರಥ್, ಅರುಣ್ ಮೇಷ್ಟ್ರು, ಟಾಪ್ ಸ್ಟಾರ್ ರೇಣು, ಜಯಲಕ್ಷ್ಮಿ, ಸುನೀಲ್ ವಿನಾಯಕ್ ನಟಿಸಿದ್ದಾರೆ. ಉಳಿದಂತೆ ಉಮೇಶ್ ಕಂಪ್ಲಾಪುರ್ ಛಾಯಾಗ್ರಹಣ, ಟಾಪ್ ಸ್ಟಾರ್ ರೇಣು ಸಂಗೀತ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top