ಜಂಟಲ್ ಮನ್ ಟೀಸರ್ ನೋಡಿದ್ರಾ?

Picture of Cinibuzz

Cinibuzz

Bureau Report

ರಾಜಾಹುಲಿ, ಸಂಹಾರ, ಪಡ್ಡೆಹುಲಿಯಂಥಾ ಕಮರ್ಷಿಯಲ್ ಸಿನಿಮಾಗಳನ್ನು ಕೊಟ್ಟವರು ನಿರ್ದೇಶಕ ಗುರು ದೇಶಪಾಂಡೆ. ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಅನಿಸಿಕೊಂಡರೂ, ತಮ್ಮ ಜೊತೆಗೆ ಕೆಲಸ ಮಾಡಿದ್ದ ನಿರ್ದೇಶಕರೊಬ್ಬರ ಸಿನಿಮಾವನ್ನು ಖುದ್ದು ಗುರುದೇಶಪಾಂಡೆ ನಿರ್ಮಿಸುತ್ತಿದ್ದಾರೆ.

ಗುರು ದೇಶಪಾಂಡೆ ಅವರ ಬಳಿ ಪ್ರಜ್ವಲ್ ದೇವರಾಜ್ ಕಾಲ್ ಶೀಟ್ ಇತ್ತಂತೆ. ಅದನ್ನು ತಮ್ಮೊಂದಿಗೆ ದುಡಿದ ಜಡೇಶ್ ಅವರಿಗೆ ನೀಡಿ, ತಾವೇ ನಿರ್ಮಾಣವನ್ನೂ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ರಾಜಹಂಸ ಚಿತ್ರವನ್ನು ಜಡೇಶ್ ಡೈರೆಕ್ಟ್ ಮಾಡಿದ್ದರು. ಈ ಬಾರಿ ಜಡೇಶ್ ಯಾರೂ ಮುಟ್ಟಿರದ ಸಬ್ಜೆಕ್ಟ್ ಒಂದನ್ನು ಕೈಗೆತ್ತಿಕೊಂಡಿದ್ದಾರೆ. ದಿನವೊಂದಕ್ಕೆ ಹದಿನೆಂಟು ಗಂಟೆಗಳ ಕಾಲ ನಿದ್ರಿಸುವ ಫೋಬಿಯಾ ಇರುವ ಹುಡುಗನ ಸುತ್ತ ಕಥೆಯೊಂದನ್ನು ಹೆಣೆದಿದ್ದಾರೆ. ಪ್ರಜ್ವಲ್ ಕೂಡಾ ಈ ವರೆಗೂ ಇಂಥಾ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ಇಂದು ಬಿಡುಗಡೆಯಾಗಿರುವ ಜಂಟಲ್ ಮನ್ ಚಿತ್ರದ ಟೀಸರ್ ಅದನ್ನು ಸಾಕ್ಷೀಕರಿಸುವಂತಿದೆ.

ಸುಮಾರು ಇಪ್ಪತ್ತೈದು ದಿನಗಳ ಕಾಲ ಡಬಲ್ ಕಾಲ್ ಶೀಟ್‍ನಲ್ಲಿ ಶೂಟ್ ಮಾಡಲಾಗಿದೆಯಂತೆ. ಅಂದರೆ, ಇಂದು ಬೆಳಿಗ್ಗೆ ಆರು ಗಂಟೆಗೆ ಚಿತ್ರೀಕರಣ ಆರಂಭವಾದರೆ ಮಾರನೆಯ ದಿನದ ಬೆಳಿಗ್ಗೆ ತನಕ ಕೆಲಸ ಚಾಲನೆಯಲ್ಲಿರುತ್ತಿತ್ತಂತೆ. ದೃಶ್ಯವೊಂದಕ್ಕೆ ಡಂಪಿಂಗ್ yard ನಲ್ಲಿ ಒಂದಿನ ಪೂರ್ತಿ ಶೂಟ್ ಮಾಡಲಾಯಿತಂತೆ. ಬರೋಬ್ಬರಿ ಏಳು ವರ್ಷದಿಂದ ಶೇಖರಣೆಗೊಂಡಿದ್ದ ಕಸದ ರಾಶಿ ಮತ್ತದರಿಂದ ಉದ್ಪತ್ತಿಯಾದ ಕೆಟ್ಟ ವಾಸನೆಯ ನಡುವೆ ಪ್ರಜ್ವಲ್ ಚಿತ್ರೀಕರಣದಲ್ಲಿ ಭಾಗಿಯಾದರಂತೆ. ಹೀರೋ ಒಬ್ಬರು ಈ ಮಟ್ಟಿಗೆ ಡೆಡಿಕೇಟೆಡ್ ಆಗಿ ನಡಿಸೋದು ಅಪರೂಪ. ಪ್ರಜ್ವಲ್ ಅದನ್ನು ಪೂರೈಸಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಡಿಫರೆಂಟ್ ಡ್ಯಾನಿ ಮತ್ತು ವಿನೋದ್ ತಲಾ ಎರಡೂವರೆ ಫೈಟ್‍ಗಳನ್ನು ಕಂಪೋಸ್ ಮಾಡಿದ್ದಾರೆ. ಪಡ್ಡೆಹುಲಿ ಚಿತ್ರದಲ್ಲಿ ನಾಯಕಿಯಾಗಿದ್ದ ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ನಾಯಕಿ. ಶಂಕರ್, ಕಾರ್ತಿಕ್, ಕಿರಣ್, ಕಿರಣ ಮತ್ತು ಪುನೀತ್ ಡೈರೆಕ್ಷನ್ ಟೀಮಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸುಧಾಕರ್ ಈ ಚಿತ್ರದಲ್ಲಿ ಛಾಯಾಗ್ರಹಣದ ಕೆಲಸವನ್ನು ನಿಭಾಯಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top