ಗುಬ್ಬಿಯ ಕಥೆಯಲ್ಲಿ ಪರ್ಪಲ್ ಪ್ರಿಯಾ ಮತ್ತು ಕ್ರಿಶ್ ಲವ್ ಸ್ಟೋರಿ!

Picture of Cinibuzz

Cinibuzz

Bureau Report

ಲಕ್ಷ್ಮಿ ಬಾರಮ್ಮ ಧಾರವಾಹಿಯ ಮೂಲಕ ಪ್ರೇಕ್ಷಕರ ಮನಗೆದ್ದ ಸುಂದರಿ ಚಿನ್ನು ಅಲಿಯಾಸ್ ಕವಿತಾ ಗೌಡ. ಲಕ್ಷ್ಮಿ ಬಾರಮ್ಮ ಯಶಸ್ಸಿನಲ್ಲಿರುವಾಗಲೇ ಬಿಗ್ ಬಾಸ್ ಗೆ ಎಂಟ್ರಿ ಪಡೆದು ಫಿನಾಲೆ ತಲುಪಿ ಮೂರನೇ ರನ್ನರ್ ಅಪ್ ಆಗಿ ಕವಿತಾ ಹೊರಬಂದರು. ಬಿಗ್ ಬಾಸ್ ಕವಿತಾಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದ್ದಲ್ಲದೇ ಅವಕಾಶಗಳು ಮನೆ ಬಾಗಿಲು ತಟ್ಟುವಂತಾಯ್ತು.  ಸಾಕಷ್ಟು ಸಿನಿಮಾಗಳಲ್ಲಿಯೂ ಬ್ಯುಸಿಯಾದರು. ಸದ್ಯ ಅವರ ನಟನೆಯ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಾಳೆ ಬಿಡುಗಡೆಯಾಗಲಿದೆ. ತಾನಾಯ್ತು ತನ್ನ ಜಾಬಾಯ್ತು.. ಎಂದಿದ್ದ ನಾಯಕ ಗುಬ್ಬಿಗೆ ಮುಟ್ಟಿ ನೋಡಿಕೊಳ್ಳುವಷ್ಟರ ಮಟ್ಟಿಗೆ ಬ್ರಹ್ಮಾಸ್ತ್ರಗಳ ಸುರಿಮಳೆಯನ್ನೇ ಸುರಿಸುವ ಪರ್ಪಲ್ ಪ್ರಿಯಾ ಎನ್ನುವ ಪಾತ್ರದಲ್ಲಿ ಕವಿತಾ ಗೌಡ ನಟಿಸಿದ್ದಾರೆ.

ಪರ್ಪಲ್ ಪ್ರಿಯಾ ಒಬ್ಬಳು ಮುಗ್ಧ ಹುಡುಗಿ. ತಾನಿರುವ ವಾತಾವರಣವನ್ನು ಖುಷಿ ಖುಷಿಯಾಗಿರುವಂತೆ ನೋಡಿಕೊಳ್ಳುವ ಹುಡುಗಿ. ನಾಯಕಿ ಪ್ರಿಯಾಗೆ ಪರ್ಪಲ್ ಫೇವರೇಟ್ ಕಲರ್ ಆಗಿರುತ್ತದೆ. ಆ ಕಾರಣಕ್ಕಾಗಿ ಆಕೆಯ ಹೆಸರಿನ ಹಿಂದೆ ಪರ್ಪಲ್ ಎನ್ನುವ ಅಡ್ಡ ಹೆಸರು ಅಂಟಿಕೊಂಡಿರುತ್ತದೆ. ಇನ್ನು ತನ್ನ ಜೀವನದಲ್ಲಾದ ಲವ್ ಫೇಲ್ಯೂರ್ ನಿಂದ ಹೊರಬರುವ ಯೋಚನೆಯಲ್ಲಿರುವಾಗಲೇ ಪರ್ಪಲ್ ಪ್ರಿಯಾಗೆ ವೆಂಕಟ ಕೃಷ್ಣ ಗುಬ್ಬಿ ಉರುಫ್ ಕ್ರಿಶ್ ಮೇಲೆ ಲವ್ವಾಗುತ್ತದೆ. ಅದಾದ ಮೇಲೆ ಎಲ್ಲವೂ ಕಲರ್ ಮಯವೇ.. ಏನು ಎತ್ತ ಹೇಗೆ ಅನ್ನೋದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು ಎನ್ನುತ್ತಾರೆ ಕವಿತಾ ಗೌಡ.

ಇನ್ನಷ್ಟು ಓದಿರಿ

Scroll to Top