ಸದ್ಯದಲ್ಲೇ ಬರಲಿದೆ ಬದಾಯಿ ಹೋ ಪಾರ್ಟ್ 2!

Picture of Cinibuzz

Cinibuzz

Bureau Report

ಮನರಂಜನೆಯ ಮೂಲಕವೇ ಸೊಸೈಟಿಗೆ ಒಂದು ಮೆಸೇಜ್ ಕೊಡುವ ಸಿನಿಮಾಗಳನ್ನು ಹೆಚ್ಚು ಮಾಡುವ ಪ್ರೊಡಕ್ಷನ್ ಕಂಪನಿ ಈ ಹಿಂದೆ ಬದಾಯಿ ಹೋ ಚಿತ್ರದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸುವ ಜತೆಗೆ ಒಂದು ಸಂದೇಶವನ್ನು ನೀಡಿತ್ತು.  ಭಾರತದಂತಹ ರಾಷ್ಟ್ರದಲ್ಲಿ ಲೈಂಗಿಕತೆಯ ಕುರಿತಾಗಿ, ಕುಟುಂಬ ಯೋಜನೆಯ ಕುರಿತಾಗಿ ಮುಕ್ತವಾಗಿ ಮಾತನಾಡುವ ಪರಿಸ್ಥಿತಿ ಅಗತ್ಯಕ್ಕಿಂತ ಹೆಚ್ಚೇ ಇದೆ. ಇಂಥದ್ದೇ ಸಂದಿಗ್ಧ ಸಮಸ್ಯೆಯಲ್ಲಿ ಸಿಲುಕುವ ಕುಟುಂಬವೊಂದರ ಕಥೆಯನ್ನು ಈ ಸಿನಿಮಾದಲ್ಲಿ ಮನೋಜ್ಞವಾಗಿ ತೋರಿಸಲಾಗಿದ್ದು, ಆಯುಷ್ಮಾನ್‌ ಖುರಾನಾ, ಸನ್ಯಾ ಮಲ್ಹೋತ್ರ, ನೀನಾ ಗುಪ್ತಾ, ಗಜರಾಜ್‌ ರಾವ್‌, ಸುರೇಖಾ ಸಿಕ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಸದ್ಯ ಇದೇ ಚಿತ್ರದ ಎರಡನೇ ಭಾಗವನ್ನು ತಯಾರಿಸಲು ಪ್ರೊಡಕ್ಷನ್ ಕಂಪನಿ ಸಿದ್ಧತೆ ನಡೆಸಿದೆ. ಪ್ರೀ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಮುಗಿದಿದ್ದು, ಮೊದಲ ಭಾಗದ ತಾರಾಗಣವೇ ಇಲ್ಲಿಯೂ ಮುಂದುವರೆಯಲಿದ್ದಾರಾ, ಕಥೆಗೆ ಲಿಂಕ್ ಇದ್ಯಾ ಎಂಬಂತಹ ವಿಚಾರಗಳನ್ನು ನಿರ್ಮಾಪಕ ವಿನೀತ್ ಜೈನ್ ಬಿಟ್ಟುಕೊಟ್ಟಿಲ್ಲ.

ಇನ್ನಷ್ಟು ಓದಿರಿ

Scroll to Top