ನಾಕುಮುಖ ಟ್ರೇಲರ್ ಬಿಡುಗಡೆ!

Picture of Cinibuzz

Cinibuzz

Bureau Report

ತಮಿಳಿನಲ್ಲಿ `ಅರ್ರರ್ರೆ ನಾಕುಮುಖ’ ಅನ್ನೋ ಹಾಡನ್ನು ನಾವೆಲ್ಲರೂ ಒಂದಲ್ಲಾ ಒಂದು ಸಮಯದಲ್ಲಿ ಕೇಳಿಯೇ ಕೇಳಿರುತ್ತೇವೆ. ಜತೆಗೆ ಕುಣಿಯುವ ಮೂಡಿಗೆ ಹೋಗಿರುತ್ತೇವೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಆ ಹಾಡಿನಲ್ಲಿ ಬಳಕೆಯಾಗಿದ್ದ ನಾಕುಮುಖ ಎನ್ನುವ ಪದವನ್ನೇ ಟೈಟಲ್ಲಾಗಿಟ್ಟುಕೊಂಡು ಹೊಸ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ನಾಕುಮುಖ ಚಿತ್ರತಂಡ ಟ್ರೇಲರ್ ಒಂದನ್ನು ಬಿಡುಗಡೆ ಮಾಡಿಕೊಂಡಿದೆ.

ಚಿತ್ರದಲ್ಲಿ ಯುವತಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ನಿಗೂಢವಾಗಿ ಕೊಲೆಯಾಗುತ್ತಾಳೆ. ರೇಪ್ ಮಾಡಿದವರ ಪೈಕಿ ಎಲ್ಲರೂ ಸರತಿ ಸಾಲಿನಲ್ಲಿ ಕೊಲೆಯಾಗುತ್ತಾ ಹೋಗುತ್ತಾರೆ. ಆ ಅತ್ಯಾಚಾರಿಗಳನ್ನು ಯಾರು ಕೊಲೆ ಮಾಡುತ್ತಾರೆ. ಎಂಬುದೇ ನಾಕುಮುಖದ ಎಳೆಯಾಗಿದೆ. ನಾಕುಮುಖ ಸಿನಿಮಾವನ್ನು ಕುಶಾನ್ ಗೌಡ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕುಶಾನ್ ಗೌಡ, ದರ್ಶನ್ ರಾಗ್, ಅಮೃತ ಅಯ್ಯಂಗಾರ್, ಪ್ರೀತಿ, ಬಲ ರಾಜ್ವಾಡಿ, ಅನೀಶ್, ಯಶವಂತ್, ಸುಚೀಂದ್ರ ಶೆಟ್ಟಿ, ಕಿರಣ್ ಸೂರ್ಯ, ಅಶ್ವಿನ್ ಷರೀಫ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top