ಸೋಶಿಯಲ್ ಮೀಡಿಯಾದಲ್ಲಿ ಬಕ್ರಾ ಆದ್ರು ಇಶಾ ಗುಪ್ತ!

Picture of Cinibuzz

Cinibuzz

Bureau Report

ಬಾಲಿವುಡ್ ಬ್ಯೂಟಿ ಇಶಾ ಗುಪ್ತಾ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಟ್ರೋಲಿಗೆ ಒಳಗಾಗಿದ್ದಾರೆ. ಹೌದು.. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ತಿಳಿಸುವ ಬದಲು ಇಶಾ ಗುಪ್ತಾ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ತಿಳಿಸಿ ಗೇಲಿಗೆ ಒಳಗಾಗಿದ್ದಲ್ಲದೇ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದಾರೆ.

https://twitter.com/eshagupta2811/status/1161915564312408065

ತಮ್ಮ ಟ್ವಿಟರ್ ಖಾತೆಯಲ್ಲಿ ನಟಿ ಇಶಾ ಗುಪ್ತಾ `ಎಲ್ಲರಿಗೂ ಗಣರಾಜ್ಯೋತ್ಸವ ದಿನದ ಶುಭಾಶಯಗಳು. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ. ಇಶಾ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅಭಿಮಾನಿಗಳು ಅವರ ವಿರುದ್ಧ ಗರಂ ಆಗಿದ್ದಾರೆ. ಟ್ರೋಲ್ ಆಗುತ್ತಿದ್ದಂತೆ ಇಶಾ ತಮ್ಮ ಟ್ವೀಟ್ ಡಿಲೀಟ್ ಮಾಡಿಕೊಂಡಿದ್ದಾರೆ. ಟ್ವೀಟ್ ಡಿಲೀಟ್ ಮಾಡಿದ ನಂತರವೂ ಅವರು ಮತ್ತೆ ಗಣರಾಜ್ಯೋತ್ಸವ ದಿನದ ಶುಭಾಶಯಗಳು ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಸೆಲೆಬ್ರೆಟಿಗಳ ಜ್ಞಾನಧಾರೆ ಎಷ್ಟರಮಟ್ಟಿಗಿರುತ್ತದೆ ನೋಡಿ..

ಇನ್ನಷ್ಟು ಓದಿರಿ

Scroll to Top