ಸೆಕ್ಸು, ಮಕ್ಳು, ಬೆಡ್ ರೂಮು ಇತ್ಯಾದಿ ವಿಚಾರಗಳನ್ನು ಭಾರತದಲ್ಲಿ ಮಾತನಾಡುವುದಿರಲಿ ಅದಕ್ಕೆ ಸಂಬಂಧಪಟ್ಟ ಸೀನೋ, ಸಿನಿಮಾ ಬರುತ್ತಿದ್ದರೂ ಆಸೆಯಿದ್ದರೂ ತಲೆ ಎತ್ತಿಯೂ ನೋಡದಷ್ಟು ಘನತೆಯನ್ನು ಕಾಯ್ದುಕೊಳ್ಳುವ ಮಂದಿಯ ಜತೆಗೆ ನಾವಿದ್ದೇವೆ. ಆದರೆ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದಂತೆ ಜನರ ಮನಸ್ಥಿತಿಯೂ ಅಪ್ ಡೇಟ್ ಆಗುತ್ತಿದ್ದು, ನಾಚಿಕೆ ವಿಚಾರವನ್ನು ಊರಿಂದ ಆಚೆಯೂ ಮಾತನಾಡುವಷ್ಟು ಧೈರ್ಯ ಸಾಕಷ್ಟು ಮಂದಿಗೆ ಬಂದಿದೆ. ಅದರಲ್ಲೂ ಬಾಲಿವುಡ್ ಮಂದಿ ಈ ವಿಚಾರದಲ್ಲಿ ರಾಕೆಟ್ ಸ್ಪೀಡ್ ನಲ್ಲಿದ್ದಾರೆ. ನಟ ನಟಿಯರ ಅಟಾಟೋಪಗಳನ್ನು ಪ್ರತಿದಿನವನ್ನು ನೋಡುವ ಮಂದಿಗೆ ಇದೇನೂ ಶಾಕಿಂಗ್ ಸುದ್ದಿಯೇನಲ್ಲ.

ಈ ವಿಚಾರವಾಗಿ ಆರಂಭದಿಂದಲೂ ಖಾಸಗಿತನವನ್ನು ಕಾಯ್ದುಕೊಳ್ಳದ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ತಾ ಮದುವೆಯಾದ 9 ತಿಂಗಳ ಬಳಿಕ ತನ್ನ ಬೆಡ್ ರೂಂ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಇತ್ತೀಚೆಗೆ ಪಿಗ್ಗಿ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ‘ ನಾನು ಮಲಗಿಕೊಂಡು ಎದ್ದಾಗ ನಿಕ್ ನನ್ನ ಮುಖ ನೋಡಲು ಬಯಸುತ್ತಾರೆ. ನಾನು ಮಲಗಿಕೊಂಡು ಎದ್ದಾಗ ನನ್ನ ಕಣ್ಣುಗಳು ಭಾರವಾಗಿರುತ್ತದೆ. ಆದರೆ ಅದು ನಿಕ್ ಗೆ ಇಷ್ಟವಾಗುತ್ತಿದೆ. ನನಗೆ ಇದು ವಿಚಿತ್ರ ಎನಿಸಿದರೂ ಕೂಡ ನಾನು ಅವರಿಗೆ ನನ್ನನ್ನು ನೋಡಲು ಅವಕಾಶ ನೀಡುತ್ತೇನೆ’ ಎಂದಿದ್ದಾರೆ.











































