ಬಾಲಿವುಡ್, ಟಾಲಿವುಡ್ ಸಿನಿಮಾಗಳ ಮೂಲಕ ಜನಮನ್ನಣೆ ಗಳಿಸುವ ಜತೆಗೆ ಸಾಕಷ್ಟು ಬೇಡಿಕೆ ಹೊಂದಿರುವ ನಟಿ ತಮನ್ನಾ ಭಾಟಿಯಾ. ಕನ್ನಡದ ಕೆಜಿಎಫ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಪಡೆದಿದ್ದ ತಮನ್ನಾ ಸದ್ಯ ಮಾಲಿವುಡ್ ಗೂ ಪದಾರ್ಪಣೆ ಮಾಡಲಿದ್ದಾರೆ.

ಹೌದು.. ಮಲಯಾಳಂ ಭಾಷೆಯ ಹಾರರ್ ಕಾಮಿಡಿ ಸಿನಿಮಾ ಸೆಂಟ್ರಲ್ ಜೈಲ್ ಪ್ರೇತಂ ಚಿತ್ರದಲ್ಲಿ ತಮನ್ನಾ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದು, ಈ ಚಿತ್ರವನ್ನು ಸಂಧ್ಯಾ ಮೋಹನ್ ನಿರ್ದೆಶನ ಮಾಡಲಿದ್ದಾರೆ. ಇಂಡಿಯನ್ ಆರ್ಟ್ಸ್ ಸ್ಟುಡಿಯೋ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳವನ್ನು ಹೂಡಲಿದೆ. ಮಿಕ್ಕಂತೆ ತಾರಾಗಣದ ಕುರಿತಾಗಿ ಸದ್ಯದಲ್ಲಿಯೇ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಿದೆ.











































