ಅಮಿತಾಬ್ ಬಚ್ಚನ್ ದೇಹಸ್ಥಿತಿ ಕೈ ಮೀರಿದೆಯಂತೆ!

Picture of Cinibuzz

Cinibuzz

Bureau Report

ಸಾಲು ಸಾಲು ಸಿನಿಮಾಗಳ ಜತೆಯಲ್ಲಿ ಅಮಿತಾಬ್ ಬಚ್ಚನ್ ಕಿರುತೆರೆಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿಯೂ ಫುಲ್ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದ 11ನೇ ಸೀಜನ್ ಕಳೆದ ಸೋಮವಾರದಿಂದಷ್ಟೇ ಆರಂಭವಾಗಿದೆ. ಇದೇ ವೇಳೆ ತಮ್ಮ ಆರೋಗ್ಯದ ಕುರಿತಾಗಿಯೂ ಮಾಹಿತಿ ಬಿಟ್ಟುಕೊಟ್ಟಿರುವ ಅಮಿತಾಬ್ ಬಚ್ಚನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಯೆಸ್.. ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತಾಬ್ ಬಚ್ಚನ್, ಸಾಮಾನ್ಯವಾಗಿ ಜನ ತಮ್ಮ ದೇಹದ ರೆಗ್ಯುಲರ್ ಚೆಕಪ್ ಇಂತಿಷ್ಟು ದಿನಕ್ಕೆ ಒಮ್ಮೆಯಂತೆ ಮಾಡಿಸಿಕೊಳ್ಳುತ್ತಲೇ ಇರಬೇಕು. ಹಾಗೆ ಮಾಡದೇ ಉಳಿದ ತನ್ನನ್ನೇ ಉದಾಹರಣೆಯಾಗಿ ನೀಡಿ, ನನ್ನ ಲಿವರ್ 75 ಭಾಗ ಹಾಳಾಗಿದ್ದು, ಕೇವಲ 25ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದೇನೆ. ಅಲ್ಲದೇ ನನಗೆ ಟ್ಯೂಬರ್ ಕ್ಯೂಲೋಸಿಸ್ ಸಮಸ್ಯೆಯೂ ಇದೆ. ಸಮಯಕ್ಕೆ ಸರಿಯಾಗಿ ರೋಗಗಳು ಪತ್ತೆಯಾದರೆ ಮಾತ್ರ ಅವುಗಳ ಚಿಕಿತ್ಸೆ ಸಾಧ್ಯ. ಇಲ್ಲದಿದ್ದರೆ ದೇವರೇ ಕಾಪಾಡಬೇಕು ಎಂದು ವಿಷಾಧವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಗುಲಾಬೋ ಸಿತಾಬೋ ಚಿತ್ರದ ಶೂಟಿಂಗ್ ಮುಗಿಸಿಕೊಂಡಿರುವ ಅಮಿತಾಬ್ ಬಚ್ಚನ್ ಸದ್ಯ ಬದ್ಲಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top