ಕರೋಡ್ ಪತಿ ಕಾರ್ಯಕ್ರಮದಲ್ಲೂ ಪಬ್ಜಿ ಹವಾ!

Picture of Cinibuzz

Cinibuzz

Bureau Report

ವಿಶ್ವದಾದ್ಯಂತ ಭಾರೀ ಕ್ರೇಜ್ ಕ್ರಿಯೇಟ್ ಮಾಡಿರುವ ಪಬ್ ಜೀ ಗೇಮ್ ಸಾಕಷ್ಟು ಮಂದಿಗೆ ಖುಷಿ ಕೊಡುವ ಜತೆಗೆ ಬದುಕಿಗೆ ಕಂಟಕವಾಗಿಯೂ ಮುಳುವಾಗಿತ್ತು. ಸದ್ಯ ಪಬ್ ಜೀ ಗೇಮ್ ಬಗ್ಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಪ್ರಶ್ನೆಯೊಂದನ್ನು ಕೇಳಲಾಗಿದೆಯಂತೆ. ಯೆಸ್.. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಒಬ್ಬರಿಗೆ ಪಬ್ ಜಿ ಫುಲ್ ಫಾರ್ಮ್ ಏನು ಎಂದು ಅಮಿತಾಬ್ ಬಚ್ಚನ್ ಪ್ರಶ್ನೆ ಕೇಳಿದ್ದಾರೆ. ವಿವೇಕ್ ಭಗತ್ ಎಂಬ ಯುವಕ ಸ್ಪರ್ಧಿಗಿ ಈ ಪ್ರಶ್ನೆ ಕೇಳಲಾಗಿದ್ದು, ಯುವಕ ಕಕ್ಕಾಬಿಕ್ಕಿಯಾಗಿದ್ದಾನೆ.

ಬಳಿಕ ವಿವೇಕ್ ಭಗತ್ ಪ್ರಶ್ನೆಗೆ ಉತ್ತರ ತೋಚದೆ ಆಡಿಯನ್ಸ್ ಪೋಲ್ ಗೆ ಮನವಿ ಮಾಡಿದ್ದಾನೆ. ಈ ವೇಳೆ ಆಡಿಯನ್ಸ್ ಶೇ. 90 ರಷ್ಟು ಜನರು ಪಬ್ ಜಿ ಫುಲ್ ಫಾರ್ಮ್ `ಪ್ಲೇಯರ್ ಅನೌನ್ಸ್ ಬ್ಯಾಟಲ್ ಗ್ರೌಂಡ್ಸ್'(Player Unknwon’s Baattle Grounds) ಎಂದು ಉತ್ತರ ನೀಡಿದ್ದಾರೆ. ಬಳಿಕ ಆಡಿಯನ್ಸ್ ಪೋನ್ ನಂತೆ ವಿವೇಕ್  ಭಗತ್ ಉತ್ತರ ಕೊಟ್ಟಿದ್ದು, ಉತ್ತರವೂ ಸರಿಯಾಗಿಯೂ ಇತ್ತು. ಬರೀ ಗೇಮ್ ಆಡಿ ಮಜ ಮಾಡುತ್ತಿದ್ದ ಮಂದಿಗೆ ಪಬ್ಜಿ ಕುರಿತಾದ ಜನರಲ್ ನಾಲೆಡ್ಜ್ ಪ್ರಶ್ನೆ ಸಾಕಷ್ಟು ಉಪಯುಕ್ತಕಾರಿಯೂ ಆಗಿದೆ.

ಇನ್ನಷ್ಟು ಓದಿರಿ

Scroll to Top