ನೆರವೇರಿತು ಬಡವ ರಾಸ್ಕಲ್ ಮುಹೂರ್ತ!

Picture of Cinibuzz

Cinibuzz

Bureau Report

ನಿನ್ನೆ ಟಗರು ಖ್ಯಾತಿಯ ಡಾಲಿ ಅಲಿಯಾಸ್ ಧನಂಜಯ್ ಅವರು ತಮ್ಮ 34ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸ್ಯಾಂಡಲ್ ವುಡ್ ನ ಸಿನಿತಾರೆಯರು, ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಈ ಮಧ್ಯೆ ಡಾಲಿ ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸ ಸಿನಿಮಾ ಬಡವ ರಾಸ್ಕಲ್ ಚಿತ್ರಕ್ಕೂ ಚಾಲನೆ ಸಿಕ್ಕಿದೆ.

ಯೆಸ್… ಧನಂಜಯ್ ನಟಿಸುತ್ತಿರುವ ಹೊಸ ಸಿನಿಮಾ ಬಡವ ರಾಸ್ಕಲ್ ಚಿತ್ರದ ಮುಹೂರ್ತ ಸಮಾರಂಭ ನಿನ್ನೆ ಬೆಂಗಳೂರಿನ ಗವಿಪುರಂನ ಬಂಡಿಮಹಾಕಾಳಿ ದೇವಾಲಯದಲ್ಲಿ ನೆರವೇರಿದೆ. ಚಿತ್ರತಂಡಕ್ಕೆ ದುನಿಯಾ ವಿಜಯ್ ಸಾಥ್ ಕೊಟ್ಟು ಧನಂಜಯ್ ಅವರಿಗೆ ಶುಭ ಹಾರೈಸಿದರು. ಬಡವ ರಾಸ್ಕಲ್ ಗೆ ಶಂಕರ್ ಗುರು ನಿರ್ದೇಶನ ಮಾಡಲಿದ್ದಾರೆ. ಡಾಲಿ ಪಿಕ್ಚರ್ಸ್ ಮೂಲಕ ಧನಂಜಯ್ ನಿರ್ಮಾಪಕರಾಗಿದ್ದು, ಗಜ್ಜಲ್ ಪುರುಷೋತ್ತಮ್ ಕೂಡ ಬಂಡವಾಳ ಹೂಡಲಿದ್ಧಾರೆ.

ಇನ್ನಷ್ಟು ಓದಿರಿ

Scroll to Top