ಮಾವನ ರೊಮ್ಯಾನ್ಸಿಗೆ ಸೊಸೆ ಸಿಡಿಮಿಡಿ!

Picture of Cinibuzz

Cinibuzz

Bureau Report

ವಯಸ್ಸು ಅರವತ್ತಾದರೂ ರೊಮ್ಯಾನ್ಸಿನಲ್ಲಿ ಹಿಂದೆ ಬೀಳದ ಟಾಲಿವುಡ್ ನ ರಿಯಲ್ ಮನ್ಮಥ ಅಕ್ಕಿನೇನಿ ನಾಗಾರ್ಜುನ್. ಅದನ್ನು ಇತ್ತೀಚಿಗೆ ಬಿಡುಗಡೆಗೊಂಡ ಮನ್ಮಥುಡು 2 ಚಿತ್ರದಲ್ಲಿ ಪ್ರಾಕ್ಟಿಕಲ್ ಆಗಿಯೇ ಪ್ರೂವ್ ಮಾಡಿದ್ದಾರೆ. ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ ಮನ್ಮಥುಡು 2 ಬಾಕ್ಸ್ ಆಫೀಸಿನಲ್ಲಿ ತಕ್ಕಮಟ್ಟಿಗೆ ಸದ್ದು ಮಾಡುತ್ತಿದ್ದು, ನಾಗಾರ್ಜುನರ ಸ್ಟೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.  ಮೊದಲಿನಿಂದಲೂ ನಾಗಾರ್ಜುನರ ಮನ್ಮಥನ ಅವತಾರವನ್ನು ನಾಗ್ ಅಭಿಮಾನಿಗಳು ಮೆಚ್ಚಿ ಹೊಗಳಿದ್ದರು. ಆದರೆ ಮನ್ಮಥುಡು 2 ಚಿತ್ರದ ನಾಗಾರ್ಜುನ್ ರೊಮ್ಯಾನ್ಸ್ ನ್ನು ಅಭಿಮಾನಿಗಳು ಹಾಡಿ ಹೊಗಳಿದ್ದರೂ ಸಹ ನಾಗಾರ್ಜುನರ ಹೆಂಡತಿ ಮತ್ತು ಸೊಸೆ ಕಮ್ ನಟಿ ಸಮಂತಾಗೆ ಮಾವನ ಮನ್ಮಥ ಲೀಲೆಯಿಂದೆ ಕೊಂಚ ಇರಿಸುಮುರುಸಾಗಿದೆಯಂತೆ.

ಯೆಸ್.. ನಾಗಾರ್ಜುನ ಈ ವಯಸ್ಸಿನಲ್ಲಿ ‘ಮನ್ಮಥುಡು 2’ ಚಿತ್ರದಲ್ಲಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿದ್ದು, ಲಿಪ್​ ಲಾಕ್​ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸೊಸೆ ಸಮಂತಾಗೆ ಕೊಂಚವೂ ಇಷ್ಟವಾಗಿಲ್ಲವಂತೆ. ಈ ಬಗ್ಗೆ ಸಿನಿಮಾ ಮಾಡುವ ಮೊದಲೇ ಕತೆ ಕೇಳಿದಾಗಲೇ ಸಮಂತಾ ಹೇಳಿಕೊಂಡಿದ್ದರಂತೆ. ಆದರೆ ಅದು ಸಮಂತಾ ತಮಾಷೆ ಮಾಡುತ್ತಿದ್ದಾರೆಂದು ಅಂದುಕೊಳ್ಳಲಾಗಿತ್ತು. ಆದರೆ ಈ ಸಿನಿಮಾ ಬಿಡುಗಡೆಯಾದ ನಂತರವೂ ಸಮಂತಾ ಚಿತ್ರದ ಪ್ರೀಮಿಯರ್ ಶೋ ಹಾಗೂ ಪ್ರಚಾರದ ಸುದ್ದಿಗೋಷ್ಠಿಗಳಿಂದ ದೂರ ಉಳಿದಿದ್ದಾರೆ. ಇದಾದ ನಂತರವೇ ನಾಗಾರ್ಜುನ ಅವರಿಗೆ ಸತ್ಯದ ಅರಿವಾಗಿದೆ ಎನ್ನಲಾಗುತ್ತಿದೆ.


ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ ಆದರೂ ಎಲ್ಲೂ ಈ ಚಿತ್ರದ ಬಗ್ಗೆ ಸಮಂತಾ ಒಂದು ಮಾತೂ ಆಡಿಲ್ಲ. ಅಲ್ಲದೆ ನಾಗಾರ್ಜುನ ಸದ್ಯ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಲಿದ್ದು, ಅದರ ಕತೆಯೂ ಹೀಗೆ ಇರುವ ಕಾರಣಕ್ಕೆ ಸಮಂತಾ ಕೋಪಗೊಂಡಿದ್ದಾರಂತೆ. ನಾಗಾರ್ಜುನ ಅವರ ‘ಬಂಗಾರರಾಜು ಕಥಾ’ ಸಿನಿಮಾದಲ್ಲೂ ನಾಗ್​ ಮತ್ತೆ ಸಿಕ್ಕಾಪಟ್ಟೆ ಹಾಟ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಬಂಗಾರರಾಜು ಕಥಾ’ ಸಿನಿಮಾದಲ್ಲಿ ನಾಗಚೈತನ್ಯ ಸಹ ಅಭಿನಯಿಸುತ್ತಿದ್ದು, ಅವರ ಪಾತ್ರವೂ ಹಾಗೆಯೇ ಇರಲಿದೆಯಂತೆ. ಅದಕ್ಕೆ ಸ್ಯಾಮ್​ ಸದ್ಯ ಕೆಲವು ಷರತ್ತುಗಳನ್ನು ಇಟ್ಟಿದ್ದು, ಅದಕ್ಕೆ ಒಪ್ಪಿ, ಕತೆಯಲ್ಲಿ ಬದಲಾವಣೆ ಮಾಡಿದರೆ ಮಾತ್ರ ಚೈತನ್ಯ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ.

ಇನ್ನಷ್ಟು ಓದಿರಿ

Scroll to Top