ಅಭಿನಂದನ್ ವರ್ಧಮಾನ್ ಪಾತ್ರದಲ್ಲಿ ವಿವೇಕ್ ಒಬೇರಾಯ್!

Picture of Cinibuzz

Cinibuzz

Bureau Report

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನಾಧಾರಿತ ಸಿನಿಮಾದಲ್ಲಿ ನರೇಂದ್ರಮೋದಿಯವರ ಪಾತ್ರದಲ್ಲಿ ವಿವೇಕ್ ಒಬೇರಾಯ್ ಮಿಂಚಿದ್ದರು. ಲೇಟಾದ್ರೂ ಲೇಟೆಸ್ಟಾಗಿಯೇ ಬಿಡುಗಡೆಯಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಕಮಾಲು ಮಾಡದೇ ಮಕಾಡೆ ಮಲಗಿಕೊಂಡಿತ್ತು. ಮೋದಿಯವರ ಪಾತ್ರಕ್ಕೆ ಜೀವ ತುಂಬುವಲ್ಲಿ ವಿವೇಕ್ ಒಬೇರಾಯ್ ಯಶಸ್ವಿಯಾಗಿರಲಿಲ್ಲ ಎಂಬ ಗುಸು ಗುಸು ಸಹ ಬಿ ಟೌನ್ ನಲ್ಲಿ ಕೇಳಿಬಂದಿತ್ತು.

ಸದ್ಯ ನಟ ವಿವೇಕ್ ಒಬೇರಾಯ್ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಕುರಿತ ಸಿನಿಮಾ ಮಾಡಲು ಮುಂದಾಗಿದ್ದು, ಬಾಲಿವುಡ್ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಮೂಲಕ ವಿಷಯವನ್ನು ರಿವೀಲ್ ಮಾಡಿದ್ದಾರೆ. ಈ ಕುರಿತಾದ ಸುದ್ದಿ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಜನರು ವಿವೇಕ್ ಒಬೇರಾಯ್ ಅವರನ್ನು ಟ್ರೋಲ್ ಮಾಡಲು ಶುರುಮಾಡಿಕೊಂಡಿದ್ದಾರೆ. ಅಲ್ಲದೇ ನೆಟ್ಟಿಗರು, ಚಿತ್ರದ ನಿರ್ದೇಶಕರು ವಿವೇಕ್ ಬದಲಾಗಿ ಅಕ್ಷಯ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು ಎಂದು ಸಲಹೆ ನೀಡಿದ್ದಾರೆ. ಕೆಲವರು ಅಜಯ್ ದೇವಗನ್, ಹೃತಿಕ್ ರೋಷನ್ ಅವರ ಹೆಸರನ್ನು ಸೂಚಿಸಿದ್ದಾರೆ. ಈ ಹಿಂದೆ ಉರಿ ಚಿತ್ರದಲ್ಲಿ ವಿಕ್ಕಿ ಕೌಶಲ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top