ರವೀನಾ ಟಂಡನ್ ಜತೆ ಡ್ಯಾನ್ಸ್ ಮಾಡಿದ ಬಾಹುಬಲಿ!

Picture of Cinibuzz

Cinibuzz

Bureau Report

ಭಾರತದಾದ್ಯಂತ ಸದ್ದು ಮಾಡುತ್ತಿರುವ ಸಾಹೋ ಸಿನಿಮಾ ಇದೇ ಆಗಸ್ಟ್ 30ರಂದು ಅಬ್ಬರಿಸೋಕೆ ರೆಡಿಯಾಗಿದೆ. ಅದರ ಜತೆ ಜತೆಗೆ ಚಿತ್ರದ ಪ್ರಮೋಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿದೆ. ಸಾಕಷ್ಟು ಪ್ರವಾಸ ಮಾಡುತ್ತಿರುವ ಪ್ರಭಾಸ್ ಸಾಹೋ ಪ್ರೊಮೋಷನ್ ನಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ಇತ್ತೀಚಿಗೆ ಪ್ರಮೋಷನ್ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಎವರ್ ಗ್ರೀನ್ ನಟಿ ರವೀನಾ ಟಂಡನ್ ಜತೆ ಪ್ರಭಾಸ್ ಡ್ಯಾನ್ಸ್ ಮಾಡಿ ಅಭಿಮಾನಿಗಳೂ ಕುಣಿಯುವಂತೆ ಮಾಡಿದ್ದಾರೆ.

ಯೆಸ್… ಖಾಸಗಿ ವಾಹಿನಿಯೊಂದರ ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಭಾಗಿಯಾಗಿದ್ದ ಪ್ರಭಾಸ್, ಬಾಲಿವುಡ್ ಸ್ಟಾರ್ ರವೀನಾ ಟಂಡನ್ ಜತೆ ಟಿಪ್ ಟಿಪ್ ಬರ್ಸಾ ಪಾನಿ ಸಾಂಗಿಗೆ ಸಕ್ಕತ್ತಾಗಿಯೇ ಸ್ಟೆಪ್ ಹಾಕಿದ್ದಾರೆ. ಇವರ ಡ್ಯಾನ್ಸಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನಷ್ಟು ಓದಿರಿ

Scroll to Top