ಕಾಣದಂತೆ ಮಾಯವಾದನು ಚಿತ್ರಕ್ಕೆ ಯು/ಎ ಪ್ರಮಾಣಪತ್ರ!

Picture of Cinibuzz

Cinibuzz

Bureau Report

ಚಲಿಸುವ ಮೋಡಗಳು ಚಿತ್ರದಲ್ಲಿ ಪುನೀತ್‍ರಾಜ್‍ಕುಮಾರ್ ಹಾಡಿದ್ದ ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಸಾರ್ವಕಾಲಿಕ ದಾಖಲೆಯನ್ನೇ ಬರೆದ ಹಾಡು. ಹೊಸ ವರ್ಷನ್ ಎಂಬಂತೆ ಅಣ್ಣಾ ಬಾಂಡ್ ಚಿತ್ರದಲ್ಲಿಯೂ ಪುನೀತ್ ರಾಜ್ ಕುಮಾರ್ ಅದೇ ಹಾಡನ್ನು ಮತ್ತೆ ಹಾಡಿ ಕುಣಿದಿದ್ದರು. ಈಗ್ಯಾಕಪ್ಪ ಆ ಹಾಡಿನ ವಿಚಾರ ಅಂದ್ರೆ ಸದ್ಯ ಅದೇ ಶೀರ್ಷಿಕೆಯಡಿ ಕನ್ನಡ ಸಿನಿಮಾವೊಂದು ನಿರ್ಮಾಣವಾಗಿ ತೆರೆಗೆ ಬರಲು ಸಿದ್ಧವಾಗಿದ್ದು, ಅದುವೇ ಕಾಣದಂತೆ ಮಾಯವಾದನು. ಈ ಚಿತ್ರವನ್ನು ರಾಜ ಪತ್ತಿಪಾರಿ ನಿರ್ದೇಶನ ಮಾಡಿದ್ದು, ಜಯ್ಯಮ್ಮನ ಮಗ ಖ್ಯಾತಿಯ ವಿಕಾಸ್ ನಾಯಕನಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ವಿಕಾಸ್, ಲವ್‌ ಕಮ್‌ ಆಕ್ಷನ್‌ ಹೀರೋ ಆಗಿ ಕಾಣಿಸಿಕೊಂಡಿದ್ದು, ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ಇನ್ನು ವಿಕಾಸ್ ಗೆ ನಾಯಕಿಯಾಗಿ ಸಿಂಧೂ ಲೋಕನಾಥ್ ನಟಿಸಿದ್ದು ತೆರೆ ಮೇಲೆ ಮುದ್ದು ಮುದ್ದಾಗಿ ಕಾಣಸಿಕೊಂಡಿದ್ದಾರೆ.ಉಳಿದಂತೆ ತಾರಾಗಣದಲ್ಲಿ ದಿ. ರಾಘವ ಉದಯ್, ಸೀತಾ ಕೋಟೆ, ಅಚ್ಯುತ್‍ಕುಮಾರ್ ಹಾಗೂ ಧರ್ಮಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಪೊಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಪ್ರಥಮ ಪ್ರತಿಯನ್ನು ಸೆನ್ಸಾರ್ ಗೂ ಕಳಿಸಿದ್ದ ಚಿತ್ರತಂಡ ಯಾವುದೇ ಕಟ್ಟು ಮ್ಯೂಟಿಲ್ಲದೇ ಯು/ಎ ಪ್ರಮಾಣ ಪತ್ರವನ್ನು ಪಡೆದುಕೊಂಡು ಸಂತಸದಲ್ಲಿದೆ. ಎಲ್ಲ ಅಂದುಕೊಂಡಂತಾದರೆ ಸದ್ಯದಲ್ಲಿಯೇ ಸಿನಿಮಾ ತೆರೆಗೆ ಬರುವ ಸಾಧ್ಯತೆಯೂ ಇದೆ.

ಇನ್ನಷ್ಟು ಓದಿರಿ

Scroll to Top