ಮುಂದಿನ ಈದ್ ಮಿಲಾದ್ ಗೆ ಸಲ್ಲು ಕಿಕ್ 2 ಬಿಡುಗಡೆ ಸಾಧ್ಯತೆ!

Picture of Cinibuzz

Cinibuzz

Bureau Report

ಬಹುತೇಕ ಮುಸ್ಲಿಂ ಹಬ್ಬಗಳ ದಿನವೇ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡಿಕೊಳ್ಳುವ ಸಲ್ಮಾನ್ ಖಾನ್ ಮುಂದಿನ ಈದ್ ಮಿಲಾದ್ ಗೂ ಹೊಸ ಸಿನಿಮಾವೊಂದನ್ನು ಬಿಡುಗಡೆ ಮಾಡುವ ಪ್ಲ್ಯಾನ್ ನಲ್ಲಿದ್ದಾರೆ. ಯೆಸ್.. 2014ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಕಂಡಿದ್ದ ಕಿಕ್ ಚಿತ್ರದ ಮುಂದಿನ ಅವತರಣಿಕೆ ಕಿಕ್ 2 ಚಿತ್ರವನ್ನು ಅಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಸ್ವತಃ ಸಲ್ಮಾನ್ ಖಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಕಿಕ್ 2 ಚಿತ್ರದ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದ್ದಾರೆ.

ಅಲ್ಲದೇ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಲ್ಮಾನ್ ಹಾಗೂ ಆಲಿಯಾ ಭಟ್ ಚೊಚ್ಚಲ ಬಾರಿಗೆ ಜತೆಯಾಗಿ ನಟಿಸಿರುವ ಇನ್ ಶಾ ಅಲ್ಲಾಹ್ ಚಿತ್ರದ ರಿಲೀಸ್ ದಿನಾಂಕವನ್ನು ಪೋಸ್ಟ್ ಪನ್ ಮಾಡಿರುವುದಾಗಿಯೂ ಸಲ್ಲು ತಿಳಿಸಿದ್ದಾರೆ. ಈಗಾಗಲೇ ಕಿಕ್ ಚಿತ್ರದ ಸೀಕ್ವೆಲ್ ನ ಚಿತ್ರಕತೆಯೂ ಸಿದ್ಧವಾಗಿದ್ದು, ಸದ್ಯದಲ್ಲಿಯೇ ಸಿನಿಮಾ ಸೆಟ್ಟೇರಲಿದೆ. ವಿಶೇಷವೆಂದರೆ ಈದ್ ಮಿಲಾದ್ ದಿನದಂದೆ ಅಕ್ಷಯ್ ಕುಮಾರ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಲಕ್ಷ್ಮಿ ಬಾಂಬ್ ಸಿನಿಮಾವು ಬಿಡುಗಡೆಯಾಗಲಿದ್ದು, ಎರಡು ಚಿತ್ರಗಳ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಯೂ ಇದೆ.

ಇನ್ನಷ್ಟು ಓದಿರಿ

Scroll to Top