ಸದ್ಯದಲ್ಲೇ ಬರಲಿದೆ ಅಟಲ್ ಜೀ ಬಯೋಪಿಕ್!

Picture of Cinibuzz

Cinibuzz

Bureau Report

ನೈಜಘಟನೆಗಳು, ಬಯೋಪಿಕ್ ನ ಮೊರೆ ಹೋಗಿರುವ ಬಿ ಟೌನ್ ಸಾಕಷ್ಟು ರಾಜಕಾರಣಿ, ಸಿನಿಮಾ ತಾರೆಗಳು, ಕ್ರೀಡಾ ಸಾಧಕರ ಕುರಿತಾದ ಸಿನಿಮಾಗಳನ್ನು ಮಾಡಲು ಈಗಾಗಲೇ ರೆಡಿಯಾಗಿದೆ. ಕೆಲವು ತಿಂಗಳು ಗಳ ಹಿಂದಷ್ಟೇ ನರೇಂದ್ರಮೋದಿಯವರ ಜೀವನಾಧಾರಿತ ಸಿನಿಮಾ ರಿಲೀಸ್ ಆಗಿದ್ದು, ಅದರ ಬೆನ್ನಲ್ಲೆ ಮತ್ತೊಬ್ಬ ರಾಜಕಾರಣಿಯ ಬಯೋಪಿಕ್ ಕೂಡಾ ತೆರೆಗೆ ಬರಲಿದೆ.

ಕಳೆದ ವರ್ಷ ನಿಧನರಾದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ಸಿನಿಮಾ ಸದ್ಯದಲ್ಲಿಯೇ ತೆರೆಗೆ ಬರಲಿದೆ. ಲೇಖಕ ಎನ್. ಪಿ. ಉಲ್ಲೇಖ್ ಅವರು ಬರೆದಿರುವ ದಿ. ಅನ್ ಟೋಲ್ಡ್ ವಾಜಪೇಯಿ ಪುಸ್ತಕದ ರೈಟ್ಸ್ ತಮ್ಮದಾಗಿಸಿಕೊಂಡಿರುವ ಅಮಾಶ್ ಫಿಲ್ಮ್ಸ್ ಮಾಲೀಕರಾದ ಶಿವಾ ಶರ್ಮಾ ಹಾಗೂ ಝೀಶಾನ್ ಅಹಮದ್ ಅವರು ಅಟಲ್ ಜೀ ಅವರ ಬದುಕಿನ ಹೋರಾಟವನ್ನು ಸಿಲ್ವರ್ ಸ್ಕ್ರೀನ್ ಮೇಲೆ ತರಲಿದ್ಧಾರೆ. ಚಿತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಬಾಲ್ಯ, ಕಾಲೇಜು ಹಾಗೂ ರಾಜಕೀಯ ಜೀವನದ ಎಕ್ಸ್ ಕ್ಲೂಸಿವ್ ಘಟನೆಗಳನ್ನು ಫೋಕಸ್ ಮಾಡಲಾಗಿದೆ.

ಇನ್ನಷ್ಟು ಓದಿರಿ

Scroll to Top