ಮಿಲನ ಪ್ರಕಾಶ್ ಜತೆ ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ!

Picture of Cinibuzz

Cinibuzz

Bureau Report

ಸ್ಯಾಂಡಲ್ ವುಡ್ ನಲ್ಲಿ ತಮ್ಮ ವಿಭಿನ್ನ ಐಡಿಯಾಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಿರ್ದೇಶಕರುಗಳ ಪೈಕಿ ಮಿಲನ ಪ್ರಕಾಶ್ ಕೂಡ ಪಟ್ಟಿಗೆ ಸೇರುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಮಿಲನ ಚಿತ್ರದ ಮೂಲಕ ಇತಿಹಾಸವನ್ನೇ ಸೃಷ್ಟಿ ಮಾಡಿದ ಡೈರೆಕ್ಟರ್ ಪ್ರಕಾಶ್ ಚಾಲೆಂಜಿಂಗ್ ಸ್ಟಾರ್ ಜತೆ ತಾರಕ್ ಎನ್ನುವ ಸಿನಿಮಾ ಸಿನಿಮಾವನ್ನು ಮಾಡಿ ಕೌಟುಂಬಿಕ ಪ್ರೇಕ್ಷಕರ ಮನಗೆಲ್ಲುವಲ್ಲಿಯೂ ಸಕ್ಸಸ್ ಆಗಿದ್ದರು. ಈ ಜೋಡಿ ಮತ್ತೆ ಒಂದಾಗಲಿದ್ದು, ಸದ್ಯದಲ್ಲಿಯೇ ಹೊಸ ಐಡಿಯಾ ಮತ್ತು ಪ್ರಾಜೆಕ್ಟ್ ನ ಜತೆಗೆ ಬರಲಿದೆ.

ಸಂಬಂಧಿತ ಚಿತ್ರ

ಯೆಸ್.. ದರ್ಶನ್ ಅವರೊಟ್ಟಿಗೆ ಮಿಲನ ಪ್ರಕಾಶ್ ಮತ್ತೊಂದು ಚಿತ್ರವನ್ನು ಮಾಡಲಿದ್ದು, ಫ್ರೀ ಪ್ರೊಡಕ್ಷನ್ ಕೆಲಸಗಳಲ್ಲಿಯೂ ತೊಡಗಿಕೊಂಡಿದ್ದಾರಂತೆ. ಅಲ್ಲದೇ ಕಥೆಯ ಒನ್ ಲೈನ್ ಕೇಳಿ ಸಂತಸ ವ್ಯಕ್ತಪಡಿಸಿರುವ ಚಾಲೆಂಜಿಂಗ್ ಸ್ಟಾರ್ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ಧಾರಂತೆ. ಇನ್ನು ಟೈಟಲ್ ಫೈನಲ್ ಆಗಿಲ್ಲವಾದರೂ ದರ್ಶನ್ ಅಭಿನಯದ ಗಂಡುಗಲಿ ಮದಕರಿ ನಾಯಕ ಚಿತ್ರದ ನಂತರ ಮಿಲನ್ ಪ್ರಕಾಶ್ ಅವರ ಸಿನಿಮಾ ಶುರುವಾಗಲಿದೆ. 2020ಕ್ಕೆ ಚಿತ್ರೀಕರಣವನ್ನು ಆರಂಭಿಸುವ ಯೋಜನೆಯಲ್ಲಿ ಮಿಲನ ಪ್ರಕಾಶ್ ಇದ್ದಾರೆ ಎಂಬುದು ಸದ್ಯದ ಸುದ್ದಿ.

ಇನ್ನಷ್ಟು ಓದಿರಿ

Scroll to Top