ಸಲ್ಲು ಬನ್ಸಾಲಿ ಗೆಳೆತನದಲ್ಲಿ ಬಿರುಕು!

Picture of Cinibuzz

Cinibuzz

Bureau Report

ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಇನ್ಶಾ ಅಲ್ಲಾಹ್ ಎಂಬ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆಂಬ ಸುದ್ದಿ ಸಾಕಷ್ಟು ಅಭಿಮಾನಿಗಳು ಖುಷಿಪಡುವಂತೆ ಮಾಡಿತ್ತು. ಆದರೆ ದಿನೇ ದಿನೇ ಸಿನಿಮಾ ಶುರುವಾಗಲು ತಡವಾಗಿದ್ದಕ್ಕೆ ಶಾಕ್ ಆಗಿದ್ದ ಅಭಿಮಾನಿಗಳಿಗೆ ಸಲ್ಲು ಮತ್ತೊಂದು ಶಾಕ್ ನೀಡಿದ್ಧಾರೆ. ಯೆಸ್.. ನಿನ್ನ ಈ ಕುರಿತು ಟ್ವೀಟ್ ಮಾಡಿರುವ ಸಲ್ಲು ಈ ಚಿತ್ರದ ಬಿಡುಗಡೆ ವಿಳಂಬವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಮೂಲಗಳ ಪ್ರಕಾರ ಸಲ್ಲು ಈ ಚಿತ್ರದಿಂದ ಹೊರನಡೆದಿದ್ದು, ಸಲ್ಲು ಮತ್ತು ಬನ್ಸಾಲಿ ಗೆಳೆತನದಲ್ಲಿ ಬಿರುಕು ಕಾಣಿಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಬರೋಬ್ಬರಿ 150 ಕೋಟಿ ರುಪಾಯಿಯ ಬಜೆಟ್ ನಲ್ಲಿ ಇನ್ಶಾ ಅಲ್ಲಾಹ್ ಚಿತ್ರ ರೆಡಿಯಾಗಬೇಕಿತ್ತು. ಅಲ್ಲದೇ ಸಲ್ಲು ಕೂಡ ಇದಕ್ಕೆ ಕೈ ಜೋಡಿಸುವುದಾಗಿಯೂ ಬನ್ಸಾಲಿಯ ಬಳಿ ಹೇಳಿಕೊಂಡಿದ್ದರಂತೆ. ಆದರೆ ಚಿತ್ರಕ್ಕಾಗಿ ಸಲ್ಮಾನ್ ಖಾನ್ 100 ಕೋಟಿ ಸಂಭಾವನೆ ಕೇಳಿದ್ದೇ ಬನ್ಸಾಲಿ ಮುನಿಸಿಕೊಳ್ಳಲು ಮುಖ್ಯಕಾರಣವೆಂದು ಹೇಳಲಾಗುತ್ತಿದೆ. 150 ಕೋಟಿ ಬಜೆಟ್ ನ ಸಿನಿಮಾದಲ್ಲಿ 100 ಕೋಟಿಯನ್ನು ಸಲ್ಮಾನ್ ಗೆ ಸಂಭಾವನೆಯಾಗಿ ನೀಡಲು ಸಾಧ್ಯವಿಲ್ಲವೆಂದು ಬನ್ಸಾಲಿ ಪ್ರತಿಕ್ರಿಯಿಸಿದ್ದಾರಂತೆ. ಅದಕ್ಕಾಗಿ ಸಿಟ್ಟಿಗೆದ್ದಿರುವ ಸಲ್ಮಾನ್ ಖಾನ್ ಸಿನಿಮಾದಿಂದ ಹೊರನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಸಲ್ಲು ಮತ್ತು ಬನ್ಸಾಲಿ ಗೆಳೆತನವು ಹಳಸಿಕೊಂಡಿದೆ ಎಂಬ ಗುಸು ಗುಸು ಬಿ ಟೌನ್ ನಲ್ಲಿ ಕೇಳಿಬರುತ್ತಿದೆ.

ಇನ್ನಷ್ಟು ಓದಿರಿ

Scroll to Top