ಹೃತಿಕ್ ರೋಷನ್ ವಾರ್ ಸಿನಿಮಾದ ಟ್ರೇಲರ್ ಬಿಡುಗಡೆ!

Picture of Cinibuzz

Cinibuzz

Bureau Report

ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಒಟ್ಟಾಗಿ ನಟಿಸಿರುವ ವಾರ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಬಿಡುಗಡೆಯಾದ ಒಂದು ತಾಸಿನಲ್ಲಿಯೇ ಬರೋಬ್ಬರಿ 5 ಲಕ್ಷ ಹಿಟ್ಸ್ ಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿರುವ ಈ ಟ್ರೇಲರ್ ಮಾಸ್ ಆಗಿದ್ದು, ಹೃತಿಕ್ ಮತ್ತು ಟೈಗರ್ ಶ್ರಾಫ್ ಇಬ್ಬರ ಸಾಹಸ ಸನ್ನಿವೇಶಗಳು ನೋಡುಗರ ರೋಮ ನಿಲ್ಲುವಂತೆ ಮಾಡುತ್ತದೆ.

ಚಿತ್ರದ ಪ್ರಮುಖ ಪಾತ್ರದಲ್ಲಿ ಭೇಫಿಕ್ರೆ ಖ್ಯಾತಿಯ ವಾಣಿ ಕಪೂರ್ ಅಭಿನಯಿಸಿದ್ದು, ಅಕ್ಟೋಬರ್‌ 2 ರಂದು ಚಿತ್ರ ರಿಲೀಸ್‌ ಆಗುವ ಸಾಧ್ಯತೆ ಇದೆ. ಅಂದಹಾಗೆ ವಾರ್‌ ಸಿನಿಮಾ ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದ್ದು, ಈ ಚಿತ್ರವನ್ನು ಸಿದ್ಧಾರ್ಥ್‌ ಆನಂದ್‌ ನಿರ್ದೇಶಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top