ಹಿಂದೊಂದು ಜಮಾನವಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಂದೋ ಎರಡೋ ಸಿನಿಮಾಗಳಷ್ಟೇ ವರ್ಷಕ್ಕೆ ಬಿಡುಗಡೆಯಾಗುತ್ತಿತ್ತು. ಅದೂ ಆದರಾಯಿತು. ಇಲ್ಲವೆಂದರೆ ಇಲ್ಲ. ಅಭಿಮಾನಿಗಳ ಒತ್ತಾಯದ ಮೇರೆಗೆ ದರ್ಶನ್ ಮತ್ತಷ್ಟೂ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಕನಸನ್ನು ನನಸು ಮಾಡಿದ್ದರು. ಸದ್ಯ ಬರೋಬ್ಬರಿ 3/4 ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಕುರುಕ್ಷೇತ್ರದ ಸಕ್ಸಸ್ ನ ಖುಷಿಯಲ್ಲಿರುವ ಡಿ ಬಾಸ್ ಬತ್ತಳಿಕೆಯಲ್ಲಿ ಒಡೆಯ, ರಾಬರ್ಟ್ ಇನ್ನೂ ಸಾಕಷ್ಟು ಚಿತ್ರಗಳು ಇದ್ದು, ಒಡೆಯ ರಿಲೀಸ್ ಗೆ ರೆಡಿಯಾಗಿದೆ. ರಾಬರ್ಟ್ ಸದ್ದಿಲ್ಲದೇ ಚಿತ್ರೀಕರಣವನ್ನು ನಡೆಸುತ್ತಿದೆ.

ಈಗಾಗಲೇ ಬೆಂಗಳೂರು, ಪಾಂಡಿಚೇರಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಿ ಮೊದಲನೇ ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ರಾಬರ್ಟ್ ಇದೀಗ ಎರಡನೇ ಹಂತದ ಚಿತ್ರೀಕರಣಕ್ಕೂಭರ್ಜರಿ ತಯಾರಿ ನಡೆಸುತ್ತಿದೆ. ಸೆಪ್ಟೆಂಬರ್ 5 ರಿಂದ ಸುಮಾರು 15 ದಿನಗಳ ಕಾಲ ರಾಬರ್ಟ್ ನ ಚಿತ್ರೀಕರಣ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ. ಇನ್ನು ರಾಬರ್ಟ್ ಗೆ ನಾಯಕಿಯಾಗಿ ಆಯ್ಕೆಯಾಗಿರುವ ಪಂಜಾಬಿ ಬೆಡಗಿ ಮೆಹರಿನ್ ಫಿರ್ಜಾದ ಎರಡನೇ ಷೆಡ್ಯೂಲ್ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.











































