ಭರಾಟೆ ಟೀಮಿಗೆ ಕೈಲಾಶ್ ಖೇರ್ ಎಂಟ್ರಿ!

Picture of Cinibuzz

Cinibuzz

Bureau Report

ರಿಲೀಸ್ ಆದ ಮೊದಲ ಟೈಟಲ್ ಸಾಂಗ್ ಮೂಲಕವೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಭರಾಟೆ ಚಿತ್ರತಂಡಕ್ಕೆ ಬಹುಭಾಷಾ ಸಿಂಗರ್ ಕೈಲಾಶ್ ಖೇರ್ ಎಂಟ್ರಿಯಾಗಿದ್ದಾರೆ. ಸ್ವತಃ ಭರಾಟೆ ಚಿತ್ರತಂಡವೇ ಬಾಂಬೆ ತೆರಳಿ ಸ್ವತಃ ಕೈಲಾಶ್ ಅವರಿಂದ ರೊಮ್ಯಾಂಟಿಕ್ ಹಾಡೊಂದನ್ನು ಹಾಡಿಸಿ ಬಂದಿದೆ. ವಿಶೇಷವೆಂದರೆ ಈ ಹಾಡಿಗೆ ಭರ್ಜರಿ ಚೇತನ್ ಸಾಹಿತ್ಯವನ್ನು ಒದಗಿಸಿದ್ದಾರೆ. ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಮೋಡಿ ಮಾಡಿರುವ ಕೈಲಾಶ್ ಭರಾಟೆ ಟೀಮಿಗೂ ಸಾಥ್ ನೀಡಿದ್ದಾರೆ.

ಭರಾಟೆಯಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಕಿಸ್ ನಾಯಕಿ ಶ್ರೀಲೀಲಾ ಜತೆಯಾಗಿದ್ದು, ಸಾಯಿಕುಮಾರ್ ಬ್ರದರ್ಸ್ ಚೊಚ್ಚಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಇದೇ ಸೆಪ್ಟೆಂಬರ್ 27ಕ್ಕೆ ಭರಾಟೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top