‘ಗುಂಜನ್​ ಸಕ್ಸೇನಾ- ದ ಕಾರ್ಗಿಲ್​ ಗರ್ಲ್​’ ಸಿನಿಮಾದ ಫಸ್ಟ್​​​ ಲುಕ್​​ ಪೋಸ್ಟರ್​​ ರಿಲೀಸ್!

Picture of Cinibuzz

Cinibuzz

Bureau Report

ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಅಕಾಲಿಕವಾಗಿ ಸಾವಿಗೀಡಾದ ಮೇಲೆ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಮಗಳು ಜಾಹ್ನವಿ ಕಪೂರ್ ತನ್ನ ಚೊಚ್ಚಲ ಚಿತ್ರದ ಮೂಲಕವೇ ಬಿ ಟೌನಿನ ಗಲ್ಲಿಗಳಲ್ಲೂ ಗುಲ್ಲೆಬಿಸಿದವರು. ಸದ್ಯ ಅವರ ಅಭಿನಯದ ಬಹುನಿರೀಕ್ಷಿತ ಗುಂಜನ್ ಸಕ್ಸೇನಾ – ದ ಕಾರ್ಗಿಲ್ ಗರ್ಲ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಜಾಹ್ನವಿ ನಟಿಸಿರುವ ಎರಡನೇ ಚಿತ್ರವಾಗಿರುವುದರಿಂದಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಧರ್ಮ ಪ್ರೊಡಕ್ಷನ್ ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಶರಣ್ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಗುಂಜನ್ ಸಕ್ಸೇನಾ ದ ಕಾರ್ಗಿಲ್ ಗರ್ಲ್ ಸಿನಿಮಾ ವಾಯು ಸೇನೆಯ ಮಹಿಳಾ ಆಫೀಸರ್ ಗುಂಜನ್ ಸಕ್ಸೇನಾ ಅವರ ಜೀವನಾಧಾರಿತ ಕಥೆಯಾಗಿದೆ. ಈ ಚಿತ್ರದ ಪೊಸ್ಟರ್ ನ್ನು ನಿರ್ಮಾಪಕ ಕರಣ್ ಜೋಹರ್ ತಮ್ಮ ಟ್ವಿಟರ್ ಖಾತೆಯಲ್ಲಿ ರಿಲೀಸ್ ಮಾಡಿರುವುದಲ್ಲದೇ “ಹುಡುಗಿಯರು ಪೈಲಟ್​ ಆಗೋದಿಲ್ಲ ಎಂದು ಗುಂಜನ್‌ ಸಕ್ಸೇನಾಗೆ ಹೇಳಿದ್ದರಂತೆ. ಆದರೆ ಆಕೆ ತನ್ನ ನಿರ್ಧಾರದಲ್ಲಿ ಅಚಲಳಾಗಿದ್ದಳು. ಹಾರುವುದಕ್ಕೆ ಬಯಸಿದ್ದಳು” ಎಂದು ಬರೆದುಕೊಂಡಿದ್ದಾರೆ. ಎಲ್ಲ ಅಂದುಕೊಂಡಂತಾದರೆ ಈ ಚಿತ್ರ 2020ರ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top