ವಿಷ್ಣು ಪ್ರಿಯ ಚಿತ್ರಕ್ಕೆ ಗೋಪಿ ಸುಂದರ್ ಮ್ಯೂಸಿಕ್ಕು!

Picture of Cinibuzz

Cinibuzz

Bureau Report

ಪಡ್ಡೆ ಹುಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಕೆ ಮಂಜು ಪುತ್ರ ಶ್ರೇಯಸ್ ಸದ್ಯ ವಿಷ್ಣು ಪ್ರಿಯ ಎಂಬ ನೈಜ ಕಥೆಯಾಧಾರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಲವರ್ ಬಾಯ್ ಗೆಟಪ್ ನಲ್ಲಿ ಕಮಾಲ್ ಮಾಡಿದ್ದ ಶ್ರೇಯಸ್ ಇದೀಗ ವಿಷ್ಣುಪ್ರಿಯನ ಅವತಾರದಲ್ಲಿ ಮಿಂಚೋಕೆ ರೆಡಿಯಾಗಿದ್ದಾರೆ. ಮಲಯಾಳಂ ನ ಖ್ಯಾತ ನಿರ್ದೇಶಕ ವಿ.ಕೆ. ಪ್ರಕಾಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಶ್ರೇಯಸ್ ಗೆ ನಾಯಕಿಯಾಗಿ ನ್ಯಾಷನಲ್ ಕ್ರಶ್ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಲಿದ್ದಾರೆ.

ಸದ್ಯ ವಿಷ್ಣುಪ್ರಿಯ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲಿಯೇ ಚಿತ್ರೀಕರಣವನ್ನು ಆರಂಭಿಸಲಿದೆ. ವಿಶೇಷವೆಂದರೆ ಇದರ ಜತೆ ಜತೆಗೆ ವಿಷ್ಣುಪ್ರಿಯ ಚಿತ್ರತಂಡಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನ ಗೀತ ಗೋವಿಂದಂ, ಮಜಿಲಿ, ಪ್ರೇಮಂ ಸೇರಿದಂತೆ ಬಹುತೇಕ ಹಿಟ್ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಗೋಪಿ ಸುಂದರ್ ವಿಷ್ಣುಪ್ರಿಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಎಲ್ಲ ಅಂದುಕೊಂಡಂತಾದರೆ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ಮಾಡಲು ಕೆ. ಮಂಜು ನಿರ್ಧರಿಸಿದ್ದು, ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿಯೂ ಇದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಓದಿರಿ

Scroll to Top