ಭಾರತದ ಅತಿದೊಡ್ಡ ಕಿರುಚಿತ್ರಗಳ ಉತ್ಸವ ಸ್ಮೈಫಾ ಶಾರ್ಟ್ಸ್ 2019 ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ. ಈಗಾಗಲೇ ಅದ್ದೂರಿ ವೇದಿಕೆ ರೆಡಿಯಾಗದ್ದು, ಈ ಬಾರಿ 260ಕ್ಕೂ ಹೆಚ್ಚು ಕಿರು ಚಲನಚಿತ್ರಕಾರರು ಪಾಲ್ಗೊಳ್ಳಲಿದ್ದಾರೆ. ಇದು ಸ್ಮೈಫಾ ಶಾರ್ಟ್ಸ್ ನ ಮೂರನೇ ಆವೃತ್ತಿಯಾಗಿದ್ದು, ಈ ಕಾರ್ಯಕ್ರಮಕ್ಕೆ ಶ್ರೀಮುರಳಿ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸಾಹಿತಿ ಜೋಗಿ, ನಿರ್ದೇಶಕ ತರುಣ್ ಸುಧೀರ್, ಛಾಯಾಗ್ರಹಕ ಭುವನ್ ಗೌಡ, ಲೋಹಿತ್ ಉತ್ಸವಕ್ಕೆ ಬಂದಿರುವ ಕಿರುಚಿತ್ರಗಳನ್ನು ಟೆಲಿ ಫ್ಲಿಕ್ಸ್ ನಲ್ಲಿ ವೀಕ್ಷಿಸಿದ್ದಾರೆ. ಅವುಗಳಲ್ಲಿ 40ಕ್ಕೂ ಹೆಚ್ಚು ಅತ್ಯುತ್ತಮ ಕಿರುಚಿತ್ರಗಳ ಆಯ್ಕೆಯನ್ನು ಮಾಡಿದ್ಧಾರೆ.

ಆಯ್ಕೆಯಾದ ಕಿರುಚಿತ್ರಗಳ ನಿರ್ದೇಶಕರಿಗೆ ನಾಳೆ ಬೆಂಗಳೂರಿನ ಶೆರಟಾನ್ ಗ್ರ್ಯಾಂಡ್ ನಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕರು ಮತ್ತು ತಂತ್ರಜ್ಞರು ಸಹ ಕಾರ್ಯಕ್ರಮದ ಆತಿಥ್ಯ ವಹಿಸಲಿದ್ಧಾರೆ. ಉಳಿದಂತೆ ಹಿತಾ ಚಂದ್ರಶೇಖರ್, ಕಾರುಣ್ ರಾಮ್ ಸೇರಿದಂತೆ ಹಲವು ಸಿನಿತಾರೆಯರ ಕಾರ್ಯಕ್ರಮವೂ ನಡೆಲಿದೆ.











































