ನಿರ್ಮಾಪಕರಾಗುತ್ತಾರಂತೆ ಧೋನಿ!

Picture of Cinibuzz

Cinibuzz

Bureau Report

ಯಾವುದಾದರೂ ಒಂದು ಕ್ಷೇತ್ರದಲ್ಲಿ ಗುರುತಿಸಿಕೊಂಡು ಫೇಮಸ್ ಆದಮೇಲೆ ಮತ್ತೊಂದು ಕ್ಷೇತ್ರದತ್ತ ಸಾಮಾನ್ಯವಾಗಿ ಹೊರಳಿಕೊಳ್ಳೋದು ಕಾಮನ್ನು. ಸದ್ಯ ಮಹೇಂದ್ರ ಸಿಂಗ್ ಧೋನಿ ತಮ್ಮ ಕ್ರಿಕೆಟ್ ಜೀವನದಿಂದ ವಿದಾಯ ಪಡೆದ ನಂತರದಲ್ಲಿ ಸಿನಿಮಾ ನಿರ್ಮಾಣ ಮಾಡುವ ಚಿಂತನೆಯಲ್ಲಿದ್ದಾರೆಂಬ ಸುದ್ದಿ ಬಿ ಟೌನ್ ನಲ್ಲಿ ಹರಿದಾಡುತ್ತಿದೆ.

ಯೆಸ್.. ಧೋನಿ ಆಪ್ತರಾಗಿರುವ ಬಾಲಿವುಡ್ ನಟ ಜಾನ್ ಅಬ್ರಾಹಂ ಅವರ ಮುಂದಿನ ಚಿತ್ರಕ್ಕೆ ಧೋನಿ ಬಂಡವಾಳ ಹೂಡಲಿದ್ದಾರೆಂಬ ಸುದ್ದಿಯೂ ಎದ್ದಿದ್ದು ಈ ಕುರಿತು ಧೋನಿಯಾಗಲಿ, ಜಾನ್ ಅಬ್ರಾಹಂ ಅವರಾಗಲಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಮೊದಲಿನಿಂದಲೂ ಸಿನಿಮಾ ಕ್ಷೇತ್ರದಲ್ಲಿ ಆಸಕ್ತರಾಗಿರುವ ಧೋನಿ ಬಿಡುವಿದ್ದಾಗಲೆಲ್ಲಾ ಸಿನಿಮಾ ನೋಡುವ ಹವ್ಯಾಸವನ್ನಿಟ್ಟುಕೊಂಡಿದ್ದಾರೆ. ಅದರಲ್ಲೂ ಧೋನಿ ಜೀವನಾಧಾರಿತ ‘ಎಂ.ಎಸ್. ಧೋನಿ: ದಿ ಅನ್​ಟೋಲ್ಡ್ ಸ್ಟೋರಿ’ ಎಂಬ ಸಿನಿಮಾ ತೆರೆಗೆ ಬಂದಮೇಲಂತೂ ಧೋನಿ ಸಿನಿಮಾಸಕ್ತಿ ಮತ್ತಷ್ಟು ಏರಿಕೆಯಾಗಿರುವ ಕಾರಣದಿಂದ ಧೋನಿ ಸಿನಿಮಾ ರಂಗ ಪ್ರವೇಶಿಸಬಹುದು ಎಂಬುದೇ ವಿಮರ್ಶಕರ ಲೆಕ್ಕಾಚಾರ.

ಇನ್ನಷ್ಟು ಓದಿರಿ

Scroll to Top