ನಟ ರೋಹನ್ ಪಬ್ ಮೇಲೆ ಸಿಸಿಬಿ ದಾಳಿ!

Picture of Cinibuzz

Cinibuzz

Bureau Report

ಬೆಂಗಳೂರಿನಲ್ಲಿ ನಿಯಮ ಬಾಹಿರವಾಗಿ ನಡೆಸುತ್ತಿದ್ದ ಪಬ್ ಮೇಲೆ ಸಿಸಿಬಿ ಪೊಲೀಸ್ ದಿಢೀರ್ ದಾಳಿ ನಡೆಸಿದ್ದಾರೆ. ಅಲ್ಲದೇ ಪಬ್ ಮಾಲೀಕರಾದ ನಟ ರೋಹನ್ ರನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಕಾನೂನಿನ ನಿಯಮ ಮೀರಿ ಬೆಳಿಗಿನ ಜಾವ 3 ಗಂಟೆಯವರೆಗೂ ಪಬ್ ಮತ್ತು ಡಿಸ್ಕೋಥೆಕ್ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಲೀ ಮೆರಿಡಿಯನ್ ಹೋಟೆಲನಲ್ಲಿ ನಟ ರೋಹನ್ ಮಾಲೀಕತ್ವದ ಶುಗರ್ ಫ್ಯಾಕ್ಟರಿ ಪಬ್ ಮೇಲೆ ದಾಳಿ ನಡೆದಿದೆ.

ಈಗಾಗಲೇ ಲೈಸೆನ್ಸ್ ರದ್ದಾಗಿ 5 ತಿಂಗಳು ಮುಗಿದಿದ್ದರೂ ಇನ್ನು ಅದನ್ನು ನವೀಕರಿಸದೇ ರೋಹನ್ ಅಕ್ರಮವಾಗಿ ಪಬ್ ನಡೆಸುತ್ತಿದ್ದರು ಎಂಬ ಆರೋಪವು ಕೇಳಿಬಂದಿದೆ.

ಇನ್ನಷ್ಟು ಓದಿರಿ

Scroll to Top