ಸಿನಿಮಾಸಕ್ತರಿಗೆ ಕಲಾತ್ಮಕ ಫಿಲಂ‌ ಅಕಾಡೆಮಿಯಿಂದ ತರಬೇತಿ!

Picture of Cinibuzz

Cinibuzz

Bureau Report

ರಿಲೈಫ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ಅರ್ಪಿಸುವ ಕಲಾತ್ಮಕ ಫಿಲಂ- ಸ್ಟೇಜ್ ಅಕಾಡೆಮಿ ವತಿಯಿಂದ ಅ.5 ಹಾಗೂ 6ರಂದು‌ ಲಎರಡು ದಿನಗಳ ಅಲ್ಪಾವಧಿಯ “ಅಭಿನಯ ಕಾರ್ಯಗಾರ” ವನ್ನು ಬೆಂಗಳೂರಿನ ಕೆಂಗೇರಿಯ ಕೊಮ್ಮಘಟ್ಟ ಚತುರ್ಥಿ ಫಾರ್ಮ್ಸ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.‌

cinema_academy_kannada_cinibuzz
cinema_academy_kannada_cinibuzz

ಈಕಾರ್ಯಗಾರದಲ್ಲಿ ರಂಗಭೂಮಿ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯದ ಬಗ್ಗೆ, ಚಿತ್ರರಂಗದ ವಿವಿಧ ಆಯಾಮಗಳು ಮೊದಲಾದ ವಿಚಾರಗಳಲ್ಲಿ ನಟನೆಯ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ರಂಗಭೂಮಿ ಕಿರುತೆರೆ ಹಾಗೂ ಬೆಳ್ಳಿತೆರೆಯ ಹಿರಿಯ ಕಲಾವಿದರಾದ ಕ.ಸುಚೇಂದ್ರ ಪ್ರಸಾದ್ ಅವರು ಕಲಾತ್ಮಕ ಫಿಲಂ-ಸ್ಟೇಜ್ ಅಕಾಡೆಮಿಯ ದಿಗ್ದರ್ಶಕರಾಗಿದ್ದು, ನಟನೆ ಕಲಿಸಲಾಗದ ವಿದ್ಯೆ ಎಂಬುದನ್ನು ಅರಿವು ಮೂಡಿಸುವುದರ ಜೊತೆಗೆ ಶಾಸ್ತ್ರೀಯ ಅಭಿನಯ ಎಲ್ಲದರ ಬಗ್ಗೆ ಎರಡು ದಿನದ ಕಾರ್ಯಗಾರವನ್ನು ನಡೆಸಿಕೊಟ್ಟರು. ಎರಡು ದಿನದ ಈ ಅಭಿನಯ ಕಾರ್ಯಗಾರಕ್ಕೆ ಮುಖ್ಯ ಅತಿಥಿಗಳಾಗಿ ಚಿತ್ರರಂಗದ ಹಿರಿಯ ನಿರ್ಮಾಪಕರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಉಪಾಧ್ಯಕ್ಷರಾದ ಎಸ್.ಏ. ಚಿನ್ನೇಗೌಡರು ಹಾಗೂ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ ಅವರು ಭಾಗವಹಿಸಿದ್ದರು. ಅಲ್ಲದೆ ನಿರ್ದೇಶಕ‌ ಯೋಗರಾಜ ಭಟ್, ಪಿ.ಶೇಷಾದ್ರಿ, ಚೇತನ್ ಕುಮಾರ್, ಉಮೇಶಣ್ಣ, ಗಿರಿಜಾ ಲೋಕೇಶ್, ಹಿರಿಯ ಕಲಾವಿದರಾದ ದತ್ತಣ್ಣ ಇವರೆಲ್ಲ ಸಂಸ್ಥೆಗೆ ಶುಭ ಕೋರಿದ್ದಾರೆ. ಅಕಾಡೆಮಿಯ ಕಾರ್ಯಕಾರಿ ಅಭಿಯೋಜಕರಾದ ನಂದೀಶ್ ಹಾಗೂ ಸಂಸ್ಥಾಪಕ ಮಂಡಳಿಯ ಗಿರೀಶ್ ಪ್ರಾಣೇಶ್ ಅವರು ಕಲಾತ್ಮಕ ಫಿಲಂ- ಸ್ಟೇಜ್ ಅಕಾಡೆಮಿಯ ಮೂಲ ಆಶಯಗಳ ಬಗ್ಗೆ ಹಾಗೂ ಕಾರ್ಯಗಾರದ ಕುರಿತು ಮಾತನಾಡಿದರು. ಸಿನಿಮಾ ಹಾಗೂ ರಂಗಭೂಮಿಯ ವಿವಿಧ ವಿಭಾಗಗಳಲ್ಲಿ ಕಲಿಯುವ ಆಸಕ್ತಿಯುಳ್ಳವರು ಸಂಸ್ಥೆಯನ್ನು ಸಂಪರ್ಕಿಸಬಹುದು. ಆಸಕ್ತಿಯುಳ್ಳವರು ವಾರಾಂತ್ಯ, ವಾರದ ತರಗತಿಗಳಿಗೆ ನೋಂದಣಿ ಮಾಡಿಸಿ, ಹಾಜರಾಗಬಹುದು. ಅಲ್ಲದೆ ಸೋಶಿಯಲ್ ಮೀಡಿಯಾ ಮೂಲಕವೂ ಭೇಟಿ ಮಾಡಬಹುದು.

ಇನ್ನಷ್ಟು ಓದಿರಿ

Scroll to Top