ಅಜಯ್ ದೇವಗನ್ ತಂದೆ ವಿಧಿವಶ!

Picture of Cinibuzz

Cinibuzz

Bureau Report

ಬಾಲಿವುಡ್ ನ ಹಿರಿಯ ಸಾಹಸ ನಿರ್ದೇಶಕ ಅಜಯ್ ದೇವಗನ್ ತಂದೆ ವೀರು ದೇವಗನ್ ವಿಧಿವಶರಾಗಿದ್ದಾರೆ. ನಿನ್ನೆ ಮುಂಜಾನೆ ಮುಂಬೈನ ತಮ್ಮ ನಿವಾಸದಲ್ಲಿ ವೀರು ದೇವಗನ್ ಕೊನೆಯುಸಿರೆಳೆದಿದ್ದಾರೆ. ಬಾಲಿವುಡ್​ನ​ ಅನೇಕ ನಟ–ನಟಿಯರು ಸೇರಿದಂತೆ ಹಿರಿಯ ನಿರ್ದೇಶಕರು ವೀರು ದೇವಗನ್​ ಸಾವಿಗೆ ಕಂಬನಿ ಮಿಡಿದಿದ್ದಾರೆ. ವೀರು ದೇವಗನ್​ 80ಕ್ಕೂ ಹೆಚ್ಚು ಹಿಂದಿ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಅಲ್ಲದೇ, ಅಜಯ್​ ದೇವಗನ್​ ನಟನೆಯ ಹಿಂದುಸ್ತಾನ್​ ಕಿ ಕಸಂ ಅನ್ನೋ ಚಿತ್ರವನ್ನು ನಿರ್ದೇಶಿಸಿದ್ದರು.  ಇನ್ಕಾರ್​ (1977), ಮಿ. ನಟ್ವರ್​ಲಾಲ್ (1979), ಕ್ರಾಂತಿ (1981), ಹಿಮ್ಮತ್​ವಾಲಾ (1983), ಶಾಹನ್​ ಶಾ(1988), ತ್ರಿದೇವ್​ (1989), ಬಾಪ್ ನುಂಬ್ರಿ ಬೇಟಾ ಡಸ್ ನುಂಬ್ರಿ (1990), ಫೂಲ್ ಔರ್ ಕಾಂಟೆ (1991) ) ಮುಂತಾದ ಚಿತ್ರಗಳಿಗೆ ವೀರು ದೇವಗನ್​ ಸಾಹಸ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top