ದಿಶಾ ಪಟಾನಿ ಇನ್ಮುಂದೆ ಬ್ಯಾಡ್ ಬಾಯ್ ಜತೆ ನಟಿಸೋಲ್ವಂತೆ!!!

Picture of Cinibuzz

Cinibuzz

Bureau Report

ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾ ಈಗಾಗಲೇ ರಿಲೀಸ್ ಗೆ ರೆಡಿಯಾಗಿದೆ. ಈದ್ ಮಿಲಾದ್ ಹಬ್ಬದಂದು ತೆರೆಗೆ ತರುವ ಪ್ಲ್ಯಾನ್ ನಲ್ಲಿ ಚಿತ್ರತಂಡವಿದೆ. ಭಾರತ್ ಪ್ರಮೋಷನ್ ಕೆಲಸಗಳಲ್ಲಿ ಸಲ್ಲು, ಕತ್ರಿನಾ ಕೈಫ್ ಫುಲ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸಲ್ಮಾನ್ ಖಾನ್ ಜತೆ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ದಿಶಾ ಪಟಾಣಿ ಶಾಕಿಂಗ್ ಸ್ಟೇಟ್ ಮೆಂಟ್ ಒಂದನ್ನು ನೀಡಿ ಸೋಶಿಯಲ್ ಮೀಡಿಯಾದಲ್ಲಿ ನ್ಯೂಸಾಗಿದ್ದಾರೆ.

ಭಾರತ್ ಸಿನಿಮಾದಲ್ಲಿ ಸರ್ಕಸ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿರುವ ದಿಶಾ, ನಾನು ಇನ್ನೊಮ್ಮೆ ಸಲ್ಮಾನ್​ ಖಾನ್​ ಜತೆಗೆ ನಟಿಸಲು ಸಾಧ್ಯವಿಲ್ಲ ಎನ್ನಿಸುತ್ತದೆ ಅಂದಿದ್ದಾರೆ. ಹೌದು ಸಲ್ಮಾನ್ ಖಾನ್ ಮತ್ತು ದಿಶಾ ಪಟಾನಿ ವಯಸ್ಸಿನ ಅಂತರವನ್ನೇ ಕಾರಣವಾಗಿಟ್ಟುಕೊಂಡು ಇನ್ಮುಂದೆ ಸಲ್ಲು ಜತೆಗೆ ನಟಿಸುವುದಿಲ್ಲ. ಭಾರತ್​ದಲ್ಲಿ ಅವರನ್ನು ಸುಮಾರು 20-30 ವರ್ಷದೊಳಗಿನವರಂತೆ ತೋರಿಸಲಾಗುತ್ತದೆ ಎಂದು ಹೇಳಿದ್ದರು. ಹಾಗಾಗಿ ಕೂಡಲೇ ನಾನು ಒಪ್ಪಿಕೊಂಡುಬಿಟ್ಟೆ. ಅವರು ತುಂಬ ಒಳ್ಳೆಯ ಮನುಷ್ಯ ಮತ್ತು ಶ್ರಮಜೀವಿ. ನಾನು ತುಂಬ ವಿಚಾರಗಳನ್ನು ಅವರಿಂದ ಕಲಿತಿದ್ದೇನೆ. ನಾನು ಇಂಥ ವಿಭಿನ್ನ ಸೆಟ್​ನಲ್ಲಿ ಇದುವರೆಗೂ ಸಿನಿಮಾ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ಓದಿರಿ

Scroll to Top