ಸೈನಿಕರಾಗುತ್ತಿದ್ದಾರೆ ಸಲ್ಲು!

Picture of Cinibuzz

Cinibuzz

Bureau Report

ಬಾಲಿವುಡ್ ನ ಸಖತ್ ಬ್ಯುಸಿಯೆಸ್ಟ್ ನಟರ ಪೈಕಿ ಸಲ್ಲು ಕೂಡ ಒಬ್ಬರು. ಸದ್ಯ ಅವರ ಭಾರತ್ ಸಿನಿಮಾ ರಿಲೀಸ್ ಗೆ ರೆಡಿ ಇದೆ. ಚಿತ್ರದ ಪ್ರೊಮೋಷನ್ ಕೆಲಸಗಳಲ್ಲಿ ನಿರತರಾಗಿರುವ ಬ್ಯಾಡ್ ಬಾಯ್ ಮುಂದಿನ ಚಿತ್ರ ಯಾವುದೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಸಲ್ಮಾನ್ ಖಾನ್ ಬಿಎಸ್ಎಫ್ ಯೋಧರೊಬ್ಬರ ಜೀವನಾಧಾರಿತ ಚಿತ್ರವನ್ನು ಮಾಡಲಿದ್ದಾರೆಂಬ ಸುದ್ದಿ ಬಿ ಟೌನ್ ನಲ್ಲಿ ಹರಿದಾಡುತ್ತಿದೆ.

ಅಂದಾಜು ಹತ್ತು ವರ್ಷಗಳ ಹಿಂದೆ ಮುಜಾಹಿದ್ದೀನ್ ಉಗ್ರಗಾಮಿ ಕ್ಯಾಂಪ್ ನ್ನು ಬಿಎಸ್ಎಫ್ ಏಕಾಂಗಿಯಾಗಿಯೇ ಮಾಡಿ ಮುಗಿಸಿದತ್ತು. ಇದರ ಪ್ರೇರಣೆಯಿಂದಲೇ ಕಥೆಯೊಂದು ಸಿದ್ದವಾಗಿದೆಯಂತೆ. ಇದು ಸಲ್ಮಾನ್ ಗೂ ಇಷ್ಟವಾಗಿದೆಯಂತೆ. ಸದ್ಯ ಭಾರತ್ ಪ್ರೊಮೋಷನ್ ಜತೆಗೆ ದಬಾಂಗ್ 3 ಶೂಟಿಂಗ್ ನಲ್ಲಿಯೂ ಬ್ಯುಸಿಯಾಗಿದ್ದು, ಜೂನ್ 2020ರ ವೇಳೆಗೆ ಹೊಸ ಸಿನಿಮಾ ಸೆಟ್ಟೇರಲಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

ಇನ್ನಷ್ಟು ಓದಿರಿ

Scroll to Top