Rachitaram_kannada_hero_notreachable_bengaluru_bangalore_cinibuzz_election

ಎಲ್ಲಿದ್ಯಾ ರಚ್ಚೂ?

Picture of Cinibuzz

Cinibuzz

Bureau Report

ಹಾಗೇ ಸುಮ್ಮನೇ ಒಮ್ಮೆ ಗಮನಿಸಿ… ಕ್ರಾಂತಿ ಸಿನಿಮಾದ ಬಿಡುಗಡೆಯ ನಂತರ ಮೀಡಿಯಾಗಳಲ್ಲಿ ಡಿಂಪಲ್ ಕ್ವೀನ್ ಕುರಿತಾದ ನ್ಯೂಸೇ ಕಾಣಿಸುತ್ತಿಲ್ಲ.

ಮೊದಲೆಲ್ಲಾ ಸ್ವತಃ ರಚಿತಾ ಮೀಡಿಯಾದವರ ಬಳಿ ಆ ಸುದ್ದಿ ಹಾಕೊಡಿ, ಈ ಸುದ್ದಿ ಹಾಕೊಡಿ ಅಂತಾ ಬೆನ್ನುಬೀಳುತ್ತಿದ್ದರು. ಸ್ವತಃ ತಾವೇ ತಮ್ಮ ಸಂದರ್ಶನ ಪ್ರಕಟಿಸುವಂತೆ ರಿಕ್ವೆಸ್ಟ್ ಮಾಡುತ್ತಿದ್ದರು. ಕಾಲಕಾಲಕ್ಕೆ ತಮ್ಮ ಸಿನಿಮಾ ಇತ್ಯಾದಿಗಳ ಕುರಿತು ಅಪ್ಡೇಟ್ಸ್ ಕೊಡುತ್ತಿದ್ದರು. ಪತ್ರಕರ್ತರಿಗೆ ಬರೆದೂ ಬರೆದು ಸಾಕಾಗಿ ಎಷ್ಟೋ ಸಲ ಅವಾಯ್ಡ್ ಮಾಡಿಬಿಡುತ್ತಿದ್ದರು. ಇದರಿಂದ ಮೇಡಮ್ಮು ಮುನಿಸಿಕೊಂಡಿರಬಹುದಾ?

 

Rachita_Ram_Caricature_Cartonn
Rachita_Ram_Caricature_Cartonn

ಯಾಕೆಂದರೆ, ಈಗೀಗ ಯಾಕೋ ಗುಳಿಕೆನ್ನೆ ಬೆಡಗಿ ಪತ್ತೇನೇ ಇಲ್ಲ. ಮೀಡಿಯಾದವರೇ ಕರೆ ಮಾಡಿದರೂ ಅಕ್ಕ ರಿಸೀವ್ ಮಾಡ್ತಿಲ್ವಂತೆ. ರಚಿತಾ ಯಾಕೆ ಸೈಲೆಂಟಾಗಿದ್ದಾರೆ? ಸದಾ ಪಬ್ಲಿಸಿಟಿ ಬಯಸುತ್ತಿದ್ದ, ಅದರಿಂದಲೇ ತಮ್ಮನ್ನು ತಾವು ಮಾರ್ಕೆಟ್ ಮಾಡಿಕೊಳ್ಳುತ್ತಿದ್ದ ರಚಿತಾ ಗಪ್ ಚುಪ್ ಆಗಿರೋದರ ಹಿಂದಿನ ಉದ್ದೇಶವಾದರೂ ಏನು ಅಂತಾ ತಲಾಷು ಮಾಡಿದರೆ, ಏನೇನೋ ಊಹಾಪೋಹಗಳು ಉದುರುತ್ತಿವೆ!

ಅದೇನೆಂದರೆ, ರಚಿತಾಗೆ ಆತ್ಮೀಯರಾಗಿರುವ ಹೀರೋ ಒಬ್ಬರು ಒಂದಿಷ್ಟು ಗೈಡೆನ್ಸ್ ನೀಡಿದ್ದಾರಂತೆ… “ನೋಡು ಚಿನ್ನಾ… ಸದಾ ಸುದ್ದಿಯಲ್ಲಿರಬೇಕೆಂದರೆ ನೀನು ಸೈಲೆಂಟಾಗಿರಬೇಕು. ನೀನಾಗೇ ಮೀಡಿಯಾದವರಿಗೆ ಅಪ್ಡೇಟ್‌ ಕೊಡ್ತಾ ಇದ್ರೆ ಮಜಾ ಇರಲ್ಲ. ಅಷ್ಟು ಸುಲಭಕ್ಕೆ ಮಾದ್ಯಮದವರಿಗೆ ಲಭ್ಯವಾಗಬಾರದು. ಅವರಾಗಿಯೇ ಟ್ರೈ ಮಾಡೀಮಾಡಿ ಮಾತಾಡಿಸಿದಾಗ ಮಾತ್ರ ನಿನ್ನ ವ್ಯಾಲ್ಯೂ ಹೆಚ್ಚಾಗೋದು. ಆ ಕುಳ್ಳೀನ ನೋಡು. ಸಿನಿಮಾನೇ ಮಾಡದಿದ್ದರೂ ನ್ಯೂಸಲ್ಲಿರ್ತಾಳೆ..” ಎಂಬಿತ್ಯಾದಿಯಾಗಿ ಉದಾಹರಣೆಯ ಸಮೇತ ಕಿವಿಮಾತು ಹೇಳಿದ್ದಾರಂತೆ. ಈ ಕಾರಣಕ್ಕೇ ರಚಿತಾ ಯಾರ ಕೈಗೂ, ಕಿವಿಗೂ ಸಿಗುತ್ತಿಲ್ಲ ಅನ್ನೋದು ತಿಳಿದವರು ವಾದ ಮಂಡಿಸುತ್ತಿದ್ದಾರೆ. ನಿಜಕ್ಕೂ ಏನಾಗಿದೆ ಅಂತಾ ಗುಳಿಕೆನ್ನೆ ಗರ್ಲಿಗೆ ಮಾತ್ರ ಗೊತ್ತು..!

 

ಮಾಧ್ಯಮದ ವಲಯದಲ್ಲಿ ಸಿನಿಮಾ, ಸೆಲೆಬ್ರಿಟಿಗಳ ಕುರಿತಾಗಿ ಒಂದಿಷ್ಟು ವಿಚಾರಗಳ ವಿನಿಮಯವಾಗುತ್ತಿರುತ್ತದೆ. ಅದನ್ನು ಓದುಗರಿಗೂ ತಲುಪಿಸುವ ದಿನದ ಅಂಕಣ ʻಮೀಡಿಯಾ ಮಾತುʼ. 

ಇನ್ನಷ್ಟು ಓದಿರಿ

Scroll to Top