ನಾವು ನೆಟ್ಟಗಿದ್ದರೆ ಊರು ತುಂಬ ನೆಂಟರೆ…

Picture of Cinibuzz

Cinibuzz

Bureau Report

ಕೋಮಲ್ ಕುಮಾರ್ ನಟನೆಯ ಯಲಾ ಕುನ್ನಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸಿಕೊಂಡೇ ಸಾಗುತ್ತಿದೆ. ಮೇರಾ ನಾಮ್ ವಜ್ರಮುನಿ ಎನ್ನುವ ಅಡಿಬರಹವೇ ಎಲ್ಲರನ್ನೂ ಸೆಳೆದಿತ್ತು. ಥೇಟು ನಟಭಯಂಕರ ವಜ್ರಮುನಿ ಅವರನ್ನೇ ಹೋಲುವ ಕೋಮಲ್ ಅವರ ಗೆಟಪ್ಪು ಕಂಡವರೆಲ್ಲಾ ಅಚ್ಛರಿ ವ್ಯಕ್ತಪಡಿಸಿದ್ದರು. ನಂತರ ವಜ್ರಮುನಿ ಅವರ ಮೊಮ್ಮಗ ಈ ಚಿತ್ರದಲ್ಲಿ ನಟಿಸಿದ್ದಾನೆ ಅನ್ನೋದು ದೊಡ್ಡ ಸುದ್ದಿಯಾಗಿತ್ತು. ಇತ್ತೀಚೆಗೆ ಚಿತ್ರದ ಟೀಸರ್ ಕೂಡಾ ಎಲ್ಲರ ಮೆಚ್ಚುಗೆ ಪಡೆದಿದೆ.

ಸದ್ಯ ಯಲಾಕುನ್ನಿ ಎಲ್ಲರ ಬಾಯಿಗೆ ಬನಾನಾ ಇಡುವ ಮೂಲಕ ಮತ್ತೊಂದು ಹಂತದ ಪ್ರಚಾರ ಗಿಟ್ಟಿಸಿದ್ದಾನೆ. ತನ್ನಾನ ತನ್ನಾನ ಬಾಯಲ್ಲಿ ಬನಾನ… ಅಂತಾ ಶುರುವಾಗುವ ಹಾಡು ಕೇಳಿದ ಯಾರಿಗೇ ಆದರೂ ಮಜಾ ಕೊಡುವಂತಿದೆ. ನಾವು ನೆಟ್ಟಗಿದ್ದರೆ ಊರು ತುಂಬ ನೆಂಟರೆ, ಟೈಮು ಸ್ವಲ್ಪ ಕೆಟ್ಟರೆ ಲೈಫು ಮಕ್ಕರೇ… ಎಂಬಿತ್ಯಾದಿ ಸಾಲುಗಳನ್ನು ಹೊಂದಿರುವ ಹಾಡಿನ ಪ್ರತೀ ಸಾಲಿನಲ್ಲಿ ಫಿಲಾಸಫಿ ಇರುವುದು ಮಾತ್ರವಲ್ಲ, ಹೊಸ ಅರ್ಥಗಳೂ ಗೋಚರಿಸುತ್ತಿವೆ.

ಚಿತ್ರದ ನಿರ್ದೇಶಕ ಎನ್.ಆರ್.ಪ್ರದೀಪ್ ಅವರೇ ಈ ಹಾಡಿನ ಸಾಹಿತ್ಯ ಬರೆದಿದ್ದಾರೆ. ರೀಲ್ಸ್ ಮಾಡುವವರಿಗೆ ಹೇಳಿಮಾಡಿಸಿದಂತಾ ಈ ಹಾಡು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್‌ ಮಾಡುತ್ತಿದೆ.

Komal Kumar Starrer 'Yala Kunni' To Release Soon | Times Now

ಈಲ್ಲೀತನಕ ಹೊರಬಂದಿರುವ ಕಟೆಂಟುಗಳನ್ನೆಲ್ಲಾ ನೋಡಿದರೆ ಎನ್.ಆರ್. ಪ್ರದೀಪ್ ಯಲಾಕುನ್ನಿಯ ಮೂಲಕ ಗೆಲುವಿನ ಖಾತೆ ತೆರೆಯೋದು ಖಚಿತ ಅನ್ನುವಂತಿದೆ. ಕೋಮಲ್ ಥರದ ವರ್ಸಟೈಲ್ ನಟರಿಗೆ ಬರೀ ಕಾಮಿಡಿ ಡೈಲಾಗು ಕೊಟ್ಟು ದೃಶ್ಯ ಕಟ್ಟುವುದು ದೊಡ್ಡ ವಿಚಾರವಲ್ಲ. ಯಲಾ ಕುನ್ನಿಯಲ್ಲಿ ಕೋಮಲ್ ಅವರಿಗಾಗಿಯೇ ಭಿನ್ನ ಬಗೆಯ ಗೆಟಪ್ಪು, ಮ್ಯಾನರಿಸಮ್ಮುಗಳನ್ನೆಲ್ಲಾ ನೀಡಿರುವುದು ನೋಡಿದರೆ, ಸೆನ್ಸೇಷನಲ್ ಸ್ಟಾರನ್ನು ಹೇಗೆ ತೋರಿಸಬೇಕು ಎನ್ನುವ ಕರಾರುವಕ್ಕು ಐಡಿಯಾ ನಿರ್ದೇಶಕ ಪ್ರದೀಪ್ ಅವರಿಗೆ ಇದ್ದಂತಿದೆ.

ಕನ್ನಡದ ಮಟ್ಟಿಗೆ ಹಾಸ್ಯದ ಜೊತೆಗೆ ಉತ್ತಮ ಕಂಟೆಂಟನ್ನೂ ಬೆರೆಸಿ, ಸಿನಿಮಾ ರೂಪಿಸುವ ನಿರ್ದೇಶಕರು ವಿರಳ. ಯಲಾಕುನ್ನಿ ಬಹುಶಃ ಚೆಂದದ ಕಥೆೈ ಸಮೇತ ಕಾಡುವ ವಿಚಾರಗಳೊಂದಿಗೆ ಎಲ್ಲರನ್ನೂ ನಗಿಸುವ ತಾಕತ್ತು ಹೊಂದಿರುವ ಎಲ್ಲ ಸಾಧ್ಯತೆ ಇದೆ. ಅದು ನಿಜವಾಗಲಿ.

ಇನ್ನಷ್ಟು ಓದಿರಿ

Scroll to Top